ಅಂಕೋಲಾ: ಪಿಕ್ನಿಕ್ ಇಲ್ಲವೇ ಇತರೆ ಕಾರಣಗಳಿಂದ ಗೆಳೆಯರೊಂದಿಗೆ ತೆರಳಿದ್ದ ಯುವಕನೋರ್ವ ಗಂಗಾವಳಿ ನದಿ ನೀರಿನ ಸೆಳೆತದಲ್ಲಿ ಸಿಲುಕಿ ಕಣ್ಮರೆಯಾದ ಘಟನೆ ತಾಲೂಕಿನ ಹಿಲ್ಲೂರ ಹೊಸಕಂಬಿ ಅರಣ್ಯ ಇಲಾಖೆ ಕಛೇರಿ ಸಮೀಪ ಸಂಭವಿಸಿದೆ. ಸುಹಾಸ ಕೃಷ್ಣ (ಪಾಂಡುರಂಗ) ನಾಯ್ಕ (35 ) ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾದ ದುರ್ದೈವಿ ಯುವಕನಾಗಿದ್ದಾನೆ.

RELATED ARTICLES  ಏಪ್ರಿಲ್ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ?

ಅಂಕೋಲಾದಿಂದ ಗೆಳೆಯರ ಬಳಗದವರು ಹಿಲ್ಲೂರ ಹೊಸಕಂಬಿ ವ್ಯಾಪ್ತಿಯ ನದಿ ತೀರದ ಹಾಗೂ ಅರಣ್ಯ ಪ್ರದೇಶದ ನಡುವಿನ ಮರಳು ಪ್ರದೇಶದಲ್ಲಿ ಪಿಕ್ನಿಕ್ ಗೆ ತೆರಳಿದ್ದರು ಎನ್ನಲಾಗಿದ್ದು, ಇದೇ ವೇಳೆ ನದಿ ತೀರದ ಮರದ ಬಳಿ ತನ್ನ ಪ್ಯಾಂಟ್ ಶರ್ಟ ಬಿಚ್ಚಿಟ್ಟು, ನೀರಿನಲ್ಲಿ ಮುಳುಗಿ ಕೊಂಡಗ ತೆಗೆಯಲು ಹೋದ ಎನ್ನಲಾದ ಈತ , ಆಕಸ್ಮಿಕ ನೀರಿನ ಸುಳಿಯಲ್ಲಿ ಸಿಲುಕಿ ಕಣ್ಮರೆಯಾದ ಎನ್ನಲಾಗಿದೆ.

RELATED ARTICLES  ರೋ‍ಟರಿ ಕ್ಲಬ್ ನಿಂದ ವ್ರತ್ತಿಪರ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿ ಕೋರ್ಸ್ ಕಾರ್ಯಗಾರ ನ.15