ಯಲ್ಲಾಪುರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಶಾನಭಾಗ ಹೊಟೆಲ್ ಎದುರುಗಡೆ ಕಾರು ಒಂದಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರೂ ಮೃತಪಟ್ಟರುವ ಘಟನೆ ನಡೆದಿದೆ. ಯಲ್ಲಾಪುರ ಪಟ್ಟಣದ ಶಾನಭಾಗ್ ಹೋಟೆಲ್ ಎದುರುಗಡೆ ಇನೋವಾ ಕಾರಿಗೆ ಬೈಕ್ ಡಿಕ್ಕಿ ಹೊಡೆದೊದಿದ್ದು, ಬೈಕ್ ನಲ್ಲಿದ್ದ ಮೂವರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡು ಇಬ್ಬರೂ ಮೃತಪಟ್ಟಿದ್ದಾರೆ. ಅಪಘಾತದ ವಿಡಿಯೋ ಶಾನಭಾಗ ಹೊಟೇಲ್ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.

RELATED ARTICLES  ಅವಕಾಶಗಳ ಸದ್ಭಳಕೆ ಮಾಡಿಕೊಳ್ಳಿ- ರವೀಂದ್ರ ಭಟ್ಟ ಸೂರಿ.

ಅಪಘಾತದಲ್ಲಿ ಮೃತರನ್ನು ಹುಣಸೆಕೊಪ್ಪದ ರಾಜು ಆಚಾರಿ, ರಾಮನಕೊಪ್ಪದ ದರ್ಶನ ಭಂಡಾರಿ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾಗಿದೆ. ಮಹಮದ್ ಗೌದ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

RELATED ARTICLES  ದಯಾನಂದ ದೇಶಭಂಡಾರಿ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ