ಶಿರಸಿ : ಯಕ್ಷಗಾನ ಮತ್ತು ತಾಳಮದ್ದಳೆ ಕ್ಷೇತ್ರದಲ್ಲಿ ತೊಡಗಿಕೊಂಡು ಮಹಾಪೋಷಕರೆನಿಸಿಕೊಂಡ, ಹಳೆಯ ಕಲಾವಿದರ ಅರ್ಥಗಾರಿಕೆಯನ್ನು ಕ್ಯಾಸೆಟ್ ಯುಗದಲ್ಲಿ ಸಂಗ್ರಹಿಸಿದ , ಸಂಸ್ಕೃತ ಅಧ್ಯಾಪಕರಾಗಿ ಸೇವಿ ಸಲ್ಲಿಸಿದ, ಹಿರಿಯ ವೈದಿಕರಾದ ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಇವರು ರವಿವಾರ ಮಧ್ಯಾಹ್ನ 4.00 ಗಂಟೆಗೆ ದೈವಾಧೀನರಾದರು.

RELATED ARTICLES  ಅಪವಿತ್ರ ಮೈತ್ರಿಯ ಆಕಸ್ಮಿಕ ಸಾಂದರ್ಭಿಕ ಶಿಶುವಿನಿಂದ ಜಿಲ್ಲೆಗೆ ಸತತವಾಗಿ ಅನ್ಯಾಯವಾಗುತ್ತಿದೆ : ಪ್ರಮೋದ ಹೆಗಡೆ.

ಇವರು ಶ್ರೀವಿದ್ಯಾ ಕಾಶ್ಯಪ ಪ್ರತಿಷ್ಠಾನ ಗಡಿಗೆಹೊಳೆ ಮಹಿಳಾ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರೂ ಆಗಿದ್ದರು. ಇವರು ಪತ್ನಿ ಸುಶೀಲಾ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಕುಟುಂಬದವರಿಗೆ ಇವರ ಅಗಲಿಕೆಯ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥನೆ..

RELATED ARTICLES  ಕೊಂಕಣದ ಕನಸಿನ ಆಲದಮರಗಳು.