ಕುಮಟಾ : ಸ್ಥಳೀಯ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ನರಸಿಂಹ ಭಟ್ಟ ಇವಳು ಇಲಾಖಾ ಮಟ್ಟದ ಪ್ರೌಢಶಾಲೆಗಳ ಕರಾಟೆ ಚಾಂಪಿಯನ್ ಶಿಪ್ ನ 64 ಕೆ.ಜಿ ವಿಭಾಗದಲ್ಲಿ ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳಿಗೆ ಕರಾಟೆ ಶಿಕ್ಷಕ ಎಸ್.ಪಿ. ಹಂದೆ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅರುಣ ನಾಯ್ಕ ತರಬೇತಿ ನೀಡಿದ್ದರು. ಇವಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಪ್ರಾಚಾರ್ಯರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

RELATED ARTICLES  ಬಿಜೆಪಿಗೆ ಎಂಟ್ರಿ ಕೊಟ್ಟ ಜಯಂತ ಪಟಗಾರ: ಇನ್ನೊಂದೆಡೆ ನಿರಂತರ ಸಭೆ ನಡೆಸುತ್ತಿದ್ದಾರೆ ಅನಂತ ಕುಮಾರ್.