ಹೊನ್ನಾವರ : ತಾಲೂಕಿನ ಚಂದಾವರದ ಕೆನರಾ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಕೆ. ನಾಯ್ಕ ಎಂಬುವರು ಚಂದಾವರದ ನೂರಾಹ್ನಿ ಮೊಹಲ್ಲಾದ ತಿರುವಿನಲ್ಲಿ ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರಕರಣ ನಡೆದಿದೆ. ಅವರ ತಲೆಗ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.