ಕುಮಟಾ : ಇಲ್ಲಿನ ಗಿಬ್ ವೃತ್ತದ ಸಮೀಪದ ಹಳೇ ತಹಶೀಲ್ದಾರ್ ಕಚೇರಿಯಲ್ಲಿದ್ದ ಭೂಮಿ ಗಣಕೀಕರಣ ವಿಭಾಗ, ಆಧಾರ ವಿಭಾಗ, ಆಹಾರ ವಿಭಾಗ ಹಾಗೂ ಅಟಲ್‍ಜಿ ಜನಸ್ನೇಹಿ ಕೇಂದ್ರವನ್ನು ಕುಮಟಾ ಮೂರೂರು ರಸ್ತೆಯಲ್ಲಿ ನೂತನವಾಗಿ  ನಿರ್ಮಾಣವಾದ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಿಸಲಾಗಿದೆ. 

ಸಾರ್ವಜನಿಕರು ಇನ್ನುಮುಂದೆ ಪಹಣಿ ಪತ್ರಿಕೆ ವತಿರಣೆ, ಆಧಾರ ನೋಂದಣಿ ಮತ್ತು ತಿದ್ದುಪಡಿ, ಪಡಿತರ ಕಾರ್ಡ್ ಹಾಗೂ ಜಾತಿ, ಆದಾಯ ಇನ್ನಿತರ ಪ್ರಮಾಣ ಪತ್ರಗಳನ್ನು ತಾಲೂಕು ಆಡಳಿತ ಸೌಧದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ತಹಶೀಲ್ದಾರ್ ಸತೀಶ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ವಿಶೇಷ ಪುಸ್ತಕ ಮೇಳ : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಆಯೋಜನೆ : ಡಿ.೨೮ ರಿಂದ ಮೂರು ದಿನಗಳ ಕಾಲ "ಅನ್ವೇಷಣಾ ೨೦೨೩-೨೪"

ಈ ಹಿಂದೆ ತಹಸೀಲ್ದಾರ್ ಕಚೇರಿಯ ಚುನಾವಣಾ ವಿಭಾಗ, ಆಡಿಳಿತ, ಸಿಬ್ಬಂದಿ, ಭೂ ಸುಧಾರಣೆ, ಎಲ್‍ಎನ್‍ಡಿ , ಅಂಕಿ ಸಂಖ್ಯೆ, ವಿವಿಧ ಯೋಜನೆ ವಿಭಾಗ ಹಾಗೂ ತಹಸೀಲ್ದಾರ್‍ರ ಗ್ರೇಡ್-2 ವಿಭಾಗಗಳ ಸೇವೆ ನೂತನ ಕಟ್ಟಡದಲ್ಲಿ ಲಭ್ಯವಾಗಿತ್ತು. ಇದೀಗ ಎಲ್ಲಾ ಸೇವೆಗಳು ತಾಲೂಕು ಆಡಳಿತ ಸೌಧದಲ್ಲಿ ಲಭ್ಯವಾಗಲಿದೆ.

RELATED ARTICLES  ದಿ ನ್ಯಾಷನಲ್ ಸ್ಮಾಲ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಎನ್ಎಸ್ಐಸಿ) ವಿಶೇಷ ನೇಮಕಾತಿ.