ಅಂಕೋಲಾ: ಯುವತಿಯಂತೆ ವೇಷ ಹಾಕಿಕೊಂಡು, ಜನರ ಮೈ ಮುಟ್ಟಿ, ಅಸಭ್ಯವಾಗಿ ವರ್ತಿಸಿ ಹಣ ಕೇಳುತ್ತಿದ್ದ ವ್ಯಕ್ತಿಯನ್ನು ಅಸಲಿ ಮಂಗಳಮುಖಿಯರು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಕಾರವಾರ ಹಾಗೂ ಅಂಕೋಲಾ ಪಟ್ಟಣದಲ್ಲಿ ವ್ಯಕ್ತಿ ಮಂಗಳಮುಖೀ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣ ವಸೂಲಿ ಮಾಡುತ್ತಿದ್ದ. ಈ ವಿಷಯವನ್ನು ಅಸಲಿ ಮಂಗಳಮುಖಿಯರ ಅಂತರಂಗ ಸಂಘಟನೆ ಸದಸ್ಯೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು.
ಕೂಡಲೇ ಅಂಕೋಲಾ ಹಾಗೂ ಕಾರವಾರದಲ್ಲಿ ಕಾರ್ಯಾಚರಣೆಗೆ ಇಳಿದ ಮಂಗಳಮುಖಿಯರಾದ ಸಂಧ್ಯಾ ಉಡುಪಿ, ಉ.ಕ. ಅಂತರಂಗ ಸಂಘಟನೆ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ, ಸುಹಾನಾ ಹಾಗೂ ಪಾರ್ವತಿ ಅವರು ಮಂಗಳಮುಖಿ ವೇಷದಲ್ಲಿದ್ದ ಪುರುಷನನ್ನು ಹಿಡಿದಿದ್ದಾರೆ.