ಅಂಕೋಲಾ : ಭಾರೀ ಮಳೆಯೊಂದಿಗೆ ಸಿಡಿಲು-ಮಿಂಚಿನ ಪರಿಣಾಮ ಮಹಿಳೆಯೊಬ್ಬಳಿಗೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದಾಳೆ. ಅಗಸೂರಿನ ಹಿತ್ತಲಗದ್ದೆಯ ನಿವಾಸಿ ರಂಜಿತಾ ಜಗದೀಶ ಗೌಡ ಸಿಡಿಲಿನ ಆಘಾತಕ್ಕೆ ಒಳಗಾದ ಮಹಿಳೆ ಇವರನ್ನು ಕೂಡಲೇ ತಾಲೂಕಾಸ್ಪತ್ರೆಗೆ
ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದ್ದಕ್ಕಿದ್ದಂತೆ ಗುಡುಗು-ಸಿಡಿಲು ಸಹಿತ ಮಳೆ ಸುರಿಯತೊಡಗಿದ್ದು, ಅದೇ ವೇಳೆ ಒಂದೂವರೆ ತಿಂಗಳ ಹಸುಗೊಸಿನೊಂದಿಗೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮನೆಗೆ ಸಿಡಿಲು ಬಡಿದಿದೆ. ಅದೃಷ್ಟ ವಶಾತ್ ಮಗುವಿಗೆ ಯಾವುದೇ ತೊಂದರೆಯಾಗಲಿಲ್ಲವಾದರೂ, ಸಿಡಿಲಿನ ಘಾತಕ್ಕೆ ರಂಜಿತಾ ಅಸ್ವಸ್ಥಗೊಂಡಿದ್ದಾಳೆ.

RELATED ARTICLES  ಸೂರಜ್ ನಾಯ್ಕ ಸೋನಿ ಜನ್ಮದಿನದ ಹಿನ್ನೆಲೆ ಡಿ‌.18 ರಂದು ಆರೋಗ್ಯ ತಪಾಸಣಾ ಉಚಿತ ಶಿಬಿರ

ಸಿಡಿಲಿಗೆ ಮನೆಯ ಗೋಡೆಯೂ ಬಿರುಕು ಬಿಟ್ಟಿದ್ದು ವಿದ್ಯುತ್ ಉಪಕರಣಗಳು, ಟಿವಿ ಮುಂತಾದವುಗಳಿಗೆ ಹಾನಿಯಾಗಿವೆ. ಕಂದಾಯ ನಿರೀಕ್ಷಕ ಭಾರ್ಗವ ನಾಯಕ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಹಸೀಲ್ದಾರ್‌ ಅಶೋಕ ಎನ್.ಭಟ್ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿ, ಎಲ್ಲ ರೀತಿಯ ಸಹಾಯ ಸಹಕಾರ ನೀಡುವ ಭರವಸೆ ನೀಡಿದರು.

RELATED ARTICLES  ಗ್ರಾಹಕರೇ ನಿಮಗೊಂದು ಸಿಹಿ ಸುದ್ದಿ:PPF ಸೇರಿದಂತೆ ಸಣ್ಣ ಉಳಿತಾಯ ಬಡ್ಡಿದರ ಏರಿಕೆ.

ತಹಸೀಲ್ದಾರರೊಂದಿಗೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ, ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂತೋಷಕುಮಾರ, ವೈದ್ಯೆ ಡಾ. ಅನುಪಮಾ ನಾಯಕ, ತರಬೇತಿ ತಹಸೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ ಇದ್ದರು.