ಹೊನ್ನಾವರ :ಹೊನ್ನಾವರ ಶರಾವತಿ ಸೇತುವೆ ಮೇಲೆ ಗ್ಯಾಸ್ ಟ್ಯಾಂಕರ್ ಚಾಲಕನೊಬ್ಬ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಗೂಡ್ಸ್ ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರಿಕ್ಷಾದಲ್ಲಿ ಚಲಾಯಿಸುತ್ತಿದ್ದ ಗಂಡ- ಹೆಂಡತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

RELATED ARTICLES  ಹೆಂಡತಿಯ ಖಾತೆಗೇ ಹಣ ವರ್ಗಾಯಿಸಿ ಬ್ಯಾಕ್ ಸಹಾಯಕ ವ್ಯವಸ್ಥಾಪಕ ನಾಪತ್ತೆ.

ಉತ್ತರ ಪ್ರದೇಶ ಮೂಲದ ಲವಕುಶ ಕುಮಾರ ಎನ್ನುವವರು ಅಪಘಾತಪಡಿಸಿದ ಟ್ಯಾಂಕರ್ ಚಾಲಕನಾಗಿದ್ದಾರೆ. ಈತನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿರುವಾಗ
ಲಗೇಜ್ ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರಿಂದ ಲಗೇಜ್ ರಿಕ್ಷಾದಲ್ಲಿದ್ದ ಹೊನ್ನಾವರ ಬಂದರರೋಡನ ಗಜಾನನ ನಾಯ್ಕ ಹಾಗೂ ಆತನ ಪತ್ನಿ ಚಂದ್ರಾವತಿ ನಾಯ್ಕ
ಗಾಯಗೊಂಡಿದ್ದಾರೆ. ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  'ಪವರ್ ಸ್ಟಾರ್'ಗಾಗಿ ಬಂದ ಪ್ರಿಯಾಂಕ..!