ವಾಷಿಂಗ್ಟನ್: ಇಸ್ರೇಲ್ ವಿರೋಧಿ ಪಕ್ಷಪಾತ ಧೋರಣೆ ಆರೋಪ ಮಾಡಿ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯುನೆಸ್ಕೋದಿಂದ ಅಮೆರಿಕ ಹೊರನಡೆದ ಬೆನ್ನಲ್ಲೇ ಇಸ್ರೇಲ್ ದೇಶ ಕೂಡ ಯುನೆಸ್ಕೋದಿಂದ ಹೊರ ನಡೆದಿದೆ.

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ಯುನೆಸ್ಕೋದಿಂದ ಹೊರಬಂದ ಇಸ್ರೇಲ್ ನಡೆಯಿಂದಾಗಿ ಯುನೆಸ್ಕೋ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗುವಂತೆ ಮಾಡಿದೆ. ಯುನೆಸ್ಕೋದಿಂದ ಹೊರಬಂದ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಪ್ರಕಟಣೆ ಹೊರಡಿಸಿದ್ದು, ಪ್ಯಾರಿಸ್ ಮೂಲದ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ಯುನೆಸ್ಕೋ ಇಸ್ರೇಲ್ ವಿರೋಧಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಯುನೆಸ್ಕೋ ಒಕ್ಕೂಟದಿಂದ ಹೊರ ಬಂದ ಅಮೆರಿಕದ ನಿರ್ಧಾರವನ್ನು ಶ್ಲಾಘಿಸಿರುವ ನೆತನ್ಯಾಹು, ಅಮೆರಿಕದ ನಿರ್ಧಾರ ದಿಟ್ಟ, ಕೆಚ್ಚೆದೆಯ ಮತ್ತು ನೈತಿಕ’ವಾದದ್ದು ಎಂದು ಬಣ್ಣಿಸಿದ್ದಾರೆ.

RELATED ARTICLES  ಮಾತೃತ್ವಮ್‍ನಿಂದ ಗೋಸಂರಕ್ಷಣೆಯ ಮೌನ ಚಳವಳಿ 10 ಲಕ್ಷ ರೂಪಾಯಿ ಮೌಲ್ಯದ ಮೇವು ವಿತರಣೆ

ಇನ್ನು ಯುನೆಸ್ಕೋದಿಂದ ಅಮೆರಿಕ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯುನೆಸ್ಕೋ ಪ್ರಧಾನಿ ನಿರ್ದೇಶಕ ಇರಿನಾ ಬೊಕೋವಾ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಅಮೆರಿಕದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಅವರ ಅಧಿಕೃತ ಪತ್ರ ನಮಗೆ ದೊರೆತಿದ್ದು, ಯುನೆಸ್ಕೋದಿಂದ ಹೊರನಡೆಯುವ ಅಮೆರಿಕ ನಿರ್ಧಾರ ವಿಷಾಧಕರ ಎಂದು ಹೇಳಿದ್ದಾರೆ.

RELATED ARTICLES  ಇಂದಿನ‌ ನಿಮ್ಮ ದಿನ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ದಿನಾಂಕ 15/04/2019 ರ ದಿನ ಭವಿಷ್ಯ