ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸಾಧನೆಯನ್ನು ಮಾಡಿದ್ದಾರೆ. ದಿನಾಂಕ ಜುಲೈ ೧೫ ರಿಂದ ೧೭ ರವರೆಗೆ ನಡೆದಿದ್ದ ೨೦೨೨-೨೩ ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪರೀಕ್ಷೆಯಲ್ಲಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪುರಸ್ಕಾರವನ್ನು ಪಡೆದಿರುತ್ತಾರೆ.

RELATED ARTICLES  ಗೋಕರ್ಣದ ಡಾ . ನಾರಾಯಣ ಸದಾಶಿವ ಭಟ್ಟರಿಗೆ ಅಂತರಾಷ್ಟ್ರೀಯ ಪುರಸ್ಕಾರ

ಉಡುಪಿಯ ಡಾ.ವಿ.ಎಸ್.ಆಚಾರ್ಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗೈಡ್ಸ್ ವಿಭಾಗದ ಪರೀಕ್ಷಾ ಶಿಬಿರ ನಡೆದಿತ್ತು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಸ್ಕೌಟ್ಸ್ ವಿಭಾಗದ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಗೈಡ್ಸ್ ವಿಭಾಗದಲ್ಲಿ ಇದರಲ್ಲಿ ಕೇಂದ್ರೀಯ ವಿದ್ಯಾಲಯದ ೧೦ನೇ ತರಗತಿಯ ವಿದ್ಯಾರ್ಥಿಗಳಾದ ಕು.ಅಮೃತಾ ಮಹಾಬಲೇಶ್ವರ ನಾಯ್ಕ,ಕು.ಧನಶ್ರೀ.ಶಿವಾನಂದ ನಾಯ್ಕ,ಕು.ಪೂರ್ವಿ ಹೆಗಡೆ,ಕು.ಸಿಂಚನಾ.ಸುರೇಶ ಖಾರ್ವಿ ಇವರು ರಾಜ್ಯಮಟ್ಟದ ಪುರಸ್ಕಾರವನ್ನು ಪಡೆದಿದ್ದರೆ, ಸ್ಕೌಟ್ಸ್ ವಿಭಾಗದಲ್ಲಿ ಕು.ಸುಬ್ರಹ್ಮಣ್ಯ ಪ್ರಸಾದ್ ಕೃಷ್ಣ ಭಟ್ , ಟೈಟಸ್ ಡಿಸೋಜ,ತುಷಾರ್ ಕಿರಣ ಮೇಸ್ತ ಇವರುಗಳು ರಾಜ್ಯ ಮಟ್ಟದ ಪುರಸ್ಕಾರವನ್ನು ಪಡೆದಿರುತ್ತಾರೆ. ಒಟ್ಟು ೭ ವಿದ್ಯಾರ್ಥಿಗಳು ರಾಜ್ಯಮಟ್ಟದ ಪುರಸ್ಕಾರವನ್ನು ಪಡೆದಿರುವುದಕ್ಕೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಶುಭವನ್ನು ಹಾರೈಸಿರುತ್ತಾರೆ

RELATED ARTICLES  ಭಟ್ಕಳ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇಲಾಖೆ ಕಛೇರಿಯ ಆಡಳಿತ ಸಹಾಯಕ ಅಧಿಕಾರಿ