ಭಟ್ಕಳ : ಅಕ್ಟೋಬರ್ 10 ರಂದು ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಪಟ್ಟಣದ ಡಿ.ಪಿ. ಕಾಲೋನಿಯ ಬಾಡಿಗೆ ಮನೆಯಿಂದ ತೆರಳಿ ನಾಪತ್ತೆಯಾದ ಭಟ್ಕಳ ಸರಕಾರಿ ಆಸ್ಪತ್ರೆಯ ಚರ್ಮ ರೋಗ ತಜ್ಞ ವೈದ್ಯ ಡಾ. ಉಮೇಶ ಎಚ್.ಟಿ. ಶುಕ್ರವಾರ ಸಂಜೆ ಭಟ್ಕಳ ಗ್ರಾಮೀಣ ಠಾಣೆಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಜರಾಗಿದ್ದಾರೆ.

RELATED ARTICLES  ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡುವ ನಿಮಗೆ ನೈತಿಕತೆ ಇದೆಯೇ? ಶಾಸಕರಿಗೆ ಮಾಜಿ ಶಾಸಕರ ಪ್ರಶ್ನೆ.

ಭಟ್ಕಳದಿಂದ ಹೊರಟ ವೈದ್ಯರು ತಮ್ಮ ಕಾರಿನ ಮೂಲಕ ಕುಂದಾಪುರಕ್ಕೆ ತೆರಳಿ ಅಲ್ಲಿಂದ ತಮ್ಮ ಪ್ರಯಾಣ ಬೆಳೆಸಿದ ಅವರು ಶಿವಮೊಗ್ಗ ಬಳ್ಳಾರಿ ಮಾರ್ಗವಾಗಿ ಅಹಮದಾಬಾದನಿಂದ ಮುಂಬೈಗೆ ತೆರಳಿರುವ ಮಾಹಿತಿ ಪಡೆದಿದ್ದ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ.

ಹರಪನಹಳ್ಳಿ ಹಳ್ಳಿ ನಿವಾಸಿ ಡಾ. ಎಚ್.ಟಿ ಉಮೇಶ ಅ.10 ರ ಬೆಳ್ಳಿಗ್ಗೆ ತನ್ನ ಮನೆಯಿಂದ ಕರ್ತವ್ಯಕ್ಕೆಂದು ತೆರಳಿದವರು ಮರಳಿ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಈ ಕುರಿತು ವೈದ್ಯರ ಪತ್ನಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

RELATED ARTICLES  ಗುರುಸೇವೆ ದೇವರನ್ನು ಒಲಿಸಿಕೊಳ್ಳುವ ಮಾರ್ಗ: ರಾಘವೇಶ್ವರ ಶ್ರೀ

ಪೋಲಿಸರು ವೈದ್ಯರ ಸಂಪರ್ಕ ಮಾಡುತ್ತಾ ದೂರದ ಮುಂಬಯಿನಲ್ಲಿ ವೈದ್ಯ ಉಮೇಶ ಇರುವುದು ದ್ರಢಪಡಿಸಿಕೊಂಡು. ಅವರನ್ನು ವಾಪಸ್ ಕರೆಸಿದ್ದಾರೆ.