ಅಂಕೋಲಾ: ಕಾಡುಹಂದಿಯನ್ನು ಬೇಟೆಯಾಡಿ ಕೆಲ ಭಾಗಗಳನ್ನು ಹುದುಗಿಟ್ಟ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವನನ್ನು ಹೆಬ್ಬುಳದಲ್ಲಿ ಬಂಧಿಸಿದ್ದಾರೆ. ಹೆಬ್ಬುಳದ ರಾಜೇಶ ಪಡ್ತಿ (29) ಬಂಧಿತ ಆರೋಪಿ ಮತ್ತೊಬ್ಬ ಆರೋಪಿ ಹೆಬ್ಬುಳದ ಸಂತೋಷ ಪಡ್ತಿ ಪರಾರಿಯಾಗಿದ್ದಾನೆ. ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕೆ.ಸಿ. ಮಾರ್ಗದರ್ಶನದಲ್ಲಿ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಯ್ಯ ಗೌಡ ಮತ್ತು ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿನಾಯಕ ಪಿ. ನಾಯ್ಕ, ಹೆಬ್ಬುಳ ವಲಯ ಅರಣ್ಯಾಧಿಕಾರಿ ಅರುಣ ನಡಕಟ್ಟಿನ, ಹೆಬ್ಬುಳ ಅರಣ್ಯ ಗಸ್ತು ಪಾಲಕ ಚನ್ನಪ್ಪ ಲಮಾಣಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಾಡು ಹಂದಿಯನ್ನು ಬೇಟೆಯಾಡಿದವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

RELATED ARTICLES  ಗ್ರಾಮ ಪಂಚಾಯತಿ ಚುನಾವಣೆಗೆ ಧುಮುಕಿ ರಾಜ್ಯಮಟ್ಟದಲ್ಲಿ ಗಮನ ಸೆಳೆದ ಎಂ ಎಸ್ಸಿ ಸ್ನಾತಕೋತ್ತರ ಪದವೀಧರೆ ನಿಧಿ

ಅಲ್ಲದೆ, ಪಕ್ಕದ ತೋಟದಲ್ಲಿ ಹುದುಗಿಟ್ಟಿದ್ದ ಕಾಡು ಹಂದಿಯ ತಲೆ, ಕರುಳು ಮತ್ತು ಕಾಲುಗಳನ್ನು ವಶಕ್ಕೆ ಪಡೆದು ಮಹಜರು ನಡೆಸಿದ್ದಾರೆ. ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಪ್ರಕರಣ ದಾಖಲಾಗಿದೆ.

RELATED ARTICLES  ಅಂಕೋಲಾ ಪೊಲೀಸರ ಕಾರ್ಯಾಚರಣೆ : ಜಿಲ್ಲೆಯ 03 ಬಾರ್ & ರೆಸ್ಟೋರೆಂಟ್ ಕಳ್ಳತನ ಪ್ರಕರಣ ಪತ್ತೆ : ನೇಪಾಳ ಮೂಲದ ಆರೋಪಿಗಳ ಬಂಧನ : 3 ಲಕ್ಷ ರೂ ನಗದು ಹಣ ವಶಕ್ಕೆ