ಭಟ್ಕಳ : ಕೊಯಮತ್ತೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಟ್ಟದ ‘ರೋಟರಾಕ್ಟ್ ಅಂತರ್ ಜಿಲ್ಲಾ ಡೆಕ್ಸ್ಟೆರಿಯಸ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ರೋಟರಾಕ್ಟ್ ಸದಸ್ಯರನ್ನೊಳಗೊಂಡ ರೋಟರಾಕ್ಟ್ ಜಿಲ್ಲೆ ೩೧೭೦ರ ತಂಡ ಉಪಾಂತ ವಿಜಯಿಯಾಗುವುದರ ಜೊತೆಗೆ ತಂಡದ ಸದಸ್ಯರುಗಳಾದ ಕಾರ್ತಿಕ್ ಮೊಗೇರ್, ಅಲಂಕಾರ್ ಮೊರೆ, ಮತ್ತು ಶಿವಂ ಗಾವಡೆ ತಲಾ ೩ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಹಾಗೂ ಕಾರ್ತಿಕ್ ಮೊಗೇರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಇವರ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್, ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ಭಟ್ಕಳ ರೋಟರಿ ಕ್ಲಬ್ ಅಧ್ಯಕ್ಷ ಡಾ. ಎ೦.ಎ ಭಾವಿಕಟ್ಟಿ, ಕಾರ್ಯದರ್ಶಿ ಶ್ರೀನಾಥ್ ಪೈ, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಾಂಜಲ್ ಮರಾಠೆ, ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ್ ನಾಯ್ಕ್, ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ವೈಷ್ಣವಿ ನಾಯ್ಕ್, ಕಾರ್ಯದರ್ಶಿ ಪ್ರಜ್ಞಾ ಗೋಲಿ, ರೋಟರಾಕ್ಟ್ ಜಿಲ್ಲಾ ಕ್ರೀಡಾ ವಿಭಾಗದ ಪ್ರಮುಖರಾದ ಸೃಷ್ಟಿ ನಾಯ್ಕ್, ಸೋಹಾಲಿ ನಾಗ್ವೇನ್ಕರ್ ಮತ್ತು ತಂಡದ ನಾಯಕ ಅಕ್ಷಯ ಮಾಯೆಕರ್ ಹರ್ಷ ವ್ಯಕ್ತಪಡಿಸಿರುತ್ತಾರೆ.