ಬೆಂಗಳೂರಿನ ಟೌನ್ ಹಾಲಿನಲ್ಲಿ‌ ನಡೆಸಲು ಉದ್ದೇಶಿಸಿರುವ ಬೀಫ್ ಫೆಸ್ಟ್ ಅನ್ನು ‘ಭಾರತೀಯ ಗೋಪರಿವಾರ’ ಉಗ್ರವಾಗಿ ಖಂಡಿಸಿದ್ದು. ಕೇರಳದಲ್ಲಿ ನಿನ್ನೆ ನಡೆದ ಅಮಾನವೀಯ ಗೋವಧೆಯನ್ನು ಇಲ್ಲಿಗೂ ಬಂದು ನಡೆಸಲು ನಾವು ‌ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ‌ ಕೊಡುವುದಿಲ್ಲ ಎಂದಿದೆ. ಸಾವಿರಾರು‌ ಗೋಭಕ್ತರು ಟೌನ್ ಹಾಲ್ ಬಳಿ ದೊಡ್ಡ ಪ್ರತಿಭಟನೆ ನಡೆಸಿದ್ದಾರೆ. ಗೋವಿನ ಕುರಿತಾಗಿ ಹಾಗೂ ಗೋ ವಧೆ ವಿರುದ್ಧ ಗೋಪರಿವಾರ ಸಂಘಟನೆ ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧವಿದೆ. ಒಂದೇ ನಾವು ಸಾಯಬೇಕು ಇಲ್ಲ ಅವರು ಸಾಯಬೇಕು , ಒಟ್ಟಿನಲ್ಲಿ ಗೋವುಗಳನ್ನು ಸಾಯಲು ಬಿಡುವುದಿಲ್ಲ ಎಂಬುದು ಭಾರತೀಯ ಗೋಪರಿವಾರದ ಕಾರ್ಯಕರ್ತರು ದೃಢ ನಿಲುವು ತಾಳಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ #StopBeefFest ಎಂದು ಈ ಕುರಿತು ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈಗ ‘ಭಾರತೀಯ ಗೋಪರಿವಾರ’ ಗೋ ಹತ್ಯೆ ನಿಲ್ಲಿಸುವಂತೆ ಬ್ರಹತ್ ಪ್ರತಿಭಟನೆ ನಡೆಸಿ ಗೋವಿನ ಕುರಿತಾಗಿ ಅಪಾರ ಕಾಳಜಿ ತೋರ್ಪಡಿಸಿದೆ.ಸಾವಿರಾರು ಜನ ಸೇರಿ ಗೋವಿನ ಕುರಿತಾಗಿ ಘೋಷಣೆ ಕೂಗುತ್ತಿದ್ದು ಗೋ ಪ್ರೇಮ ಮೆರೆದಿದ್ದಾರೆ.

RELATED ARTICLES  ನೋಟು ನಿಷೇಧ 'ಮಹಾ ದುರಂತ': ಮೋದಿ ವಿರುದ್ಧ ರಾಹುಲ್ ಟೀಕೆ