ಕುಮಟಾ : ವ್ಯಕ್ತಿಯೊಬ್ಬ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಎಪಿಎಂಸಿ ಎದುರಿನಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಈ ಹಿಂದೆ ಕುಮಟಾದ ವಿವಿಧೆಡೆ ಹೋಟೆಲ್ ನಡೆಸಿದ್ದ ಹಾಗೂ ಅದೇ ವೃತ್ತಿಯನ್ನು ಮುಂದುವರಿಸಿದ್ದ ಅಂಕೋಲಾ ತಾಲೂಕಿನ ಮಂಜಗುಣಿ ನಿವಾಸಿ ಕಮಲಾಕರ ನರಸಿಂಹ ತಾಂಡೇಲ(೫೩) ಸಾವಿಗೆ ಶರಣಾದ ವ್ಯಕ್ತಿ.

RELATED ARTICLES  ಡಿಸೋಜಾ ಮುಡಿಗೇರಿದ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ : ಸೇವೆಗೆ ಸಂದ ಗೌರವ.

ಈತ ವ್ಯವಹಾರದಲ್ಲಿ ನಷ್ಟ ಆಗಿದ್ದರಿಂದಲೋ ಅಥವಾ ತನಗಿರುವ ಯಾವುದೋ ಕಾಯಿಲೆಯಿಂದಲೋ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 66 ಜನರಿಗೆ ಕರೋನಾ ಪಾಸಿಟಿವ್

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ತಮ್ಮ ಶ್ರೀನಾಥ ನರಸಿಂಹ ತಾಂಡೇಲ ನೀಡಿದ ಹೇಳಿಕೆಯನ್ವಯ ಕುಮಟಾ ಪಿ.ಎಸ್.ಐ ಸುನೀಲ್ ಬಂಡಿವಡ್ಡರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.