ಭಟ್ಕಳ : ಪೊಲೀಸ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಮಾರುತಿ ನಾಯ್ಕ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಿಎಲ್‌ಡಿ ಬ್ಯಾಂಕ್ ವೃತ್ತದಲ್ಲಿ ಮಾರುತಿ ನಾಯ್ಕ ಅವರ ಮೋಟಾರ್ ಬೈಕ್ ಎದುರಿಗೆ
ಹೋಗುತ್ತಿದ್ದ ಆಟೋ ರಿಕ್ಷಾಗೆ ಬಡಿದಿದ್ದು, ಸ್ಥಳದಲ್ಲಿ ವಾದ, ವಿವಾದಗಳು ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಡಿವಾಯ್‌ಎಸ್ಪಿ ಶ್ರೀಕಾಂತ, ಸಿಪಿಐ ಚಂದನ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿ ಪಡೆದಿದ್ದಾರೆ.

ಸದರಿ ಆಟೋ ರಿಕ್ಷಾ ಚಾಲಕನನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿದ್ದು ಅಪಘಾತ ಘಟನೆ ನಂತರ ಮೋಟಾರ್ ಬೈಕ್ ಚಾಲಕ ಮಾರುತಿ ನಾಯ್ಕ ಅಪಘಾತ ಸ್ಥಳದಲ್ಲಿ ತೋರಿದ ವರ್ತನೆಯ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದು, ಇದನ್ನು ದೃಢೀಕರಿಸುವ ನಿಟ್ಟಿನಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಮಧ್ಯಾಹ್ನ ಪಿಎಲ್‌ಡಿ ಬ್ಯಾಂಕ್ ಸಮೀಪ ಮುಖ್ಯ ರಸ್ತೆಗೆ ಹೊಂದಿಕೊಂಡು ಇರುವ ಅಂಗಡಿಗಳಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ.