ಭಟ್ಕಳ : ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಡುಗೆ ಕೋಣೆಯ ಜಂತಿಗೆ ಮಹಿಳೆಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗ್ರೆ ಮಾವಿನಕಟ್ಟೆಯಲ್ಲಿ ನಡೆದಿದೆ. ಸುತ್ತಲ ಜನರ ಅಭಿಪ್ರಾಯದಂತೆ ಮಾವಿನಕಟ್ಟಾ ನಿವಾಸಿಯಾದ ನಾಗೇಶ ಎಂಬಾತನಿಗೆ ಮದುವೆಯಾಗಿದ್ದು, ಮದುವೆ ಆದಾಗಿನಿಂದ ಗಂಡನೊoದಿಗೆ ಉತ್ತಮ ರೀತಿಯಲ್ಲಿ ಬದುಕು ಮಾಡಿಕೊಂಡಿದ್ದವಳು. ಇವಳಿಗೆ 7 ತಿಂಗಳ ಗಂಡು ಮಗೂ ಸಹ ಇದೆ. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಹಿಳೆ, ಮನೆಯ ಅಡುಗೆ ಕೊನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

RELATED ARTICLES  ಮಹಾಶಿವರಾತ್ರಿ ನಿಮಿತ್ತ ಕುಮಟಾದ ಕಡ್ಲೆ ಬೀಚ್ ನಲ್ಲಿ ಗಮನ ಸೆಳೆದ ಮರಳಿನ ಕಲಾಕೃತಿಗಳು.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು, ಶೈಲಾ ನಾಗೇಶ ದೇವಾಡಿಗ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಘಟನೆ ಗಮನಿಸಿದ ಮನೆಯವರು ಉರುಳು ಹಾಕಿಕೊಂಡ ಬಟ್ಟೆಯನ್ನು ಕತ್ತರಿಸಿ ಭಟ್ಕಳ, ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದಾಗ, ಸಾವನ್ನಪ್ಪಿರುವ ಖಚಿತ ಪಡಿಸಿದ್ದಾರೆ ಎನ್ನಲಾಗಿದೆ. ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

RELATED ARTICLES  ನೈಜ ಸೌಂದರ್ಯದ ಘನಿಯಾಗಿದೆ ಗೋಕರ್ಣದ ಕೋಟಿತೀರ್ಥ:ಮಿಂದು ಪುನೀತರಾಗುತ್ತಿರುವ ಪ್ರವಾಸಿಗರು.