ಕಾರವಾರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಾರ್ಯ ಮಾಡಿದ್ದರು ಎನ್ನುವ ಕುರಿತಾಗಿ ಅಭ್ಯರ್ಥಿಗಳ ದೂರಿನನ್ವಯ ಪಕ್ಷದ ಶಿಸ್ತು ಸಮಿತಿ ಹಲವರನ್ನು ಅವರ ಪದಾಧಿಕಾರಿ ಜವಬ್ದಾರಿಯಿಂದ ಮುಕ್ತಿಗೊಳಿಸಿ ಕ್ರಮ ಕೈಗೊಂಡಿತ್ತು. ಆದರೇ ಇದೀಗ ರಾಜ್ಯ ಸಮಿತಿ ನಿರ್ದೇಶನದ ಮೇಲೆ ಮರು ನೇಮಕವನ್ನು ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕರವರು ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನು ಮರು ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರುವ ವಿಷಯ ಮುನ್ನಲೆಯಲ್ಲೇ ಇದೇ .ಈ ಮಧ್ಯೆ ಪಕ್ಷದವರೇ ತನ್ನ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಇದರಿಂದಾಗಿ ಹೆಚ್ಚು ಮತದಲ್ಲಿ ಗೆಲ್ಲಬೇಕಾದ ತಾನು ಅಲ್ಪ ಮತದಲ್ಲಿ ಗೆಲ್ಲುವಂತಾಯ್ತು ಹೀಗಾಗಿ ತನಗೆ ದ್ರೋಹ ಮಾಡಿದ ಪಕ್ಷದ ಹಲವು ವ್ಯಕ್ತಿಗಳ ಮೇಲೆ ಮುನಿಸಿಕೊಂಡು ಹೈಕಮಾಂಡ್ ಗೆ ಅವರು ದೂರು ನೀಡಿದ್ದರು. ಇದರ ಜೊತೆ ಸೋತ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಸಹ ದೂರು ನೀಡಿದ್ದರು.
ಯಲ್ಲಾಪುರದಲ್ಲಿ ಮರು ನೇಮಕ ಗೊಂಡವರು ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಇದ್ದವರಾದರೇ ಭಟ್ಕಳದಲ್ಲೂ ಸಹ ಸುನೀಲ್ ನಾಯ್ಕರನ್ನು ವಿರೋಧಿಸುವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಬೆಂಬಲಿಗರಾಗಿದ್ದಾರೆ. ಇನ್ನು ಕೇವಲ ಯಲ್ಲಾಪುರ ಮತ್ತು ಭಟ್ಕಳಕ್ಕೆ ಮಾತ್ರ ಸೀಮಿತವಾಗಿ ಮರು ನೇಮಕ ಆಗಿದೆ.
ಮರು ನೇಮಕ ಆದವರು ಇವರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ,
1) ಶ್ರೀಮತಿ ಕಲ್ಪನಾ ಗಜಾನನ ನಾಯ್ಕ (ಜಿಲ್ಲಾ ಉಪಾಧ್ಯಕ್ಷರು)
2) ಬಾಬು ಬಾಂದೇಕರ (ಶಕ್ತಿಕೇಂದ್ರ ಪ್ರಮುಖರು ಸಬಗೇರಿ)
3) ಶ್ರೀ ಕೆ ಟಿ ಹೆಗಡೆ (ತಾಲೂಕಾ ಮಾಧ್ಯಮ ಪ್ರಕೋಷ್ಠದ ಸಂಚಾಲಕರು)
4) ಶ್ರೀ ವಿಠಲ ಜಾನು ಪಾಂಡ್ರಮಿಶ (ತಾಲೂಕಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ)
5) ಶ್ರೀ ಗಣಪತಿ ಆರ್ ಗಾಂವರ್, ಮಾನಿಗದ್ದೆ (ಜಿಲ್ಲಾ ವಿಶೇಷ ಆಮಂತ್ರಿತರು)
ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ,
1) ಶ್ರೀ ರವಿ ನಾಯ್ಕ (ಅಧ್ಯಕ್ಷರು ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ)
2) ಶ್ರೀ ಸುರೇಶ ತಿಮ್ಮಪ್ಪ ನಾಯ್ಕ (ಸಂಚಾಲಕರು ಜಿಲ್ಲಾ ಕಾನೂನು ಪ್ರಕೋಷ್ಠ) 3) ಶ್ರೀ ವಿಷ್ಣುಮೂರ್ತಿ ಹೆಗಡೆ (ಪ್ರ. ಕಾರ್ಯದರ್ಶಿ ಜಿಲ್ಲಾ ರೈತ ಮೋರ್ಚಾ)
4) ಶ್ರೀ ಮುಕುಂದ ಮಂಜುನಾಥ ನಾಯ್ಕ (ಸಂಚಾಲಕರು ಜಿಲ್ಲಾ ಕಾರ್ಮಿಕ ಪ್ರಕೋಷ್ಠ)
5) ಶ್ರೀ ಈಶ್ವರ ನಾರಾಯಣ ನಾಯ್ಕ (ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಪ್ರಭಾರಿ)