ಹೊನ್ನಾವರ : ಡೆಂಗ್ಯೂ ಜ್ಯರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24 )ಡೆಂಗ್ಯೂಗೆ ಬಲಿಯಾದ ಯುವಕನಾಗಿದ್ದಾನೆ.

RELATED ARTICLES  ಮಂಜುನಾಥ ಭಟ್ಟ ಕಟ್ಟೆಯವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ.

ಈತ ಸಾಗರಶ್ರೀ ಬೋಟ್ ನಲ್ಲಿ ಮೀನುಗಾರನಾಗಿ ಕಾರ್ಯನಿರ್ವಹಿಸುತಿದ್ದು,ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತಿದ್ದನು. ಚಿಕಿತ್ಸೆ ಫಲಿಸದೇ ಯುವಕ ಮೃತನಾಗಿದ್ದಾನೆ. ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಇನ್ನೂ ಇಬ್ಬರಿಗೆ ಸಹ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಅವರು ಸಹ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

RELATED ARTICLES  ಶ್ರೀರಾಮ ಚರಿತೆ ನವ ತಾಳಮದ್ದಲೆಗೆ ಚಾಲನೆ.