ಭಟ್ಕಳ : ದಸರೆ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಉತ್ತರ ಕನ್ನಡದ ಸಮುದ್ರ ತಡಿಗೆ ಪ್ರವಾಸಕ್ಕೆ ಬರುತ್ತಿದ್ದು ಪ್ರವಾಸಿಗರ ರಕ್ಷಣೆಯೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅದೆಷ್ಟೋ ಜನ ಪ್ರವಾಸಿಗರು ಸಮುದ್ರ ಸ್ನಾನಕ್ಕೆ ಇಳಿದು, ಸಮುದ್ರ ಪಾಲಾದ ಘಟನೆಗಳು ನಡೆಯುತ್ತಲೇ ಇದ್ದರೂ ಪ್ರವಾಸಿಗರು, ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಸಮುದ್ರಕ್ಕೆ ಇಳಿಯುತ್ತಿದ್ದು ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ.
ಮುರ್ಡೇಶ್ವರದಲ್ಲಿ ಮೂರು ಜನ ಸಮುದ್ರದ ಸುಳಿಕೆ ಸಿಲುಕಿದ ಸಂದರ್ಭದಲ್ಲಿ ಅಪಾಯ ಎದುರಾಗಿದ್ದು, ಪ್ರವಾಸಿಗರನ್ನು ಲೈಪ್ ಗಾರ್ಡಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಬಾಗಲುಕೋಟೆಯಿಂದ ಆಗಮಿಸಿದ್ದ ಮೂರು ಜನ ಪ್ರವಾಸಿಗರು ನೀರಿನಲ್ಲಿ ಇಳಿದಾಗ ಅಲೆಗೆ ಸಿಲುಕಿದ್ದು ಈ ವೇಳೆ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಶಶಿ, ಪಾಂಡು, ರಾಮಚಂದ್ರರವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.
ಬಾಗಲುಕೋಟೆ ಮೂಲದ ಬಸವನಗೌಡ ಪಾಟೀಲ್(22), ಶರಣು ಇಂಚಲ್(21), ರವಿಚಂದ್ರನ್(22)ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ.