ಜೋಯಿಡಾ : ತಾಲೂಕಿನ ಅನಮೋಡ ಚೆಕ್ ಪೋಸ್ಟ ಹತ್ತಿರ ಖಚಿತ ಮಾಹಿತಿ ಆಧಾರದ ಮೇರೆಗೆ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ವೇಳೆ ಬೈಕ್ ಮತ್ತು ಸರಾಯಿಯನ್ನು ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ನೆದರಲ್ಲಿ ಅಬ್ಬಾಸ್ ಅಲಿ ಮ್ಯಾಗಿನ ಮಟ್ಟಿ ಹಾವೇರಿ ತಾಲೂಕು ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನ ಸಂಖ್ಯೆ KA 27EK 1046 ರಲ್ಲಿ ಸುಮಾರು 54 ಲೀ ಅಂದಾಜು ಮೌಲ್ಯ 8640 ಹಾಗೂ ವಾಹನ ಸೇರಿ ಒಟ್ಟೂ ಅಂದಾಜು ಮೌಲ್ಯ 50000 ರೂ ಗಳಾಗಿದೆ.

RELATED ARTICLES  ಒಂಟಿ ಮನೆಗೆ ಕನ್ನ ಹಾಕಿದ ಖಧೀಮರು

ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ ಹಾಗೂ ಅಬಕಾರಿ ಉಪ ಅಧಿಕ್ಷಕರು ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪನಿರೀಕ್ಷಕರು ಮಂಜುಕುಮಾರ ನಾಯ್ಕ, ಅನಮೋಡ ಅಬಕಾರಿ ಪಿ.ಎಸ್.ಐ ಟಿ.ಬಿ.ಮಲ್ಲಣ್ಣನವರ ಸಿಬ್ಬಂದಿಗಳಾದ ಸದಾಶಿವ ರಾಥೋಡ,ಈರಣ್ಣ ಕುರುಬೇಟ್, ಆರ್,ಎನ್ ನಾಯಕ, ಪಾಲ್ಗೊಂಡಿದ್ದರು.

RELATED ARTICLES  ಹಾಲು ಪೂರೈಕೆ ಮಾಡಿದವರಿಗೆ ಸಂದಿತು ಗೌರವ: ಸಿದ್ದಾಪುರದಲ್ಲೊಂದು ಅರ್ಥಪೂರ್ಣ ಕಾರ್ಯಕ್ರಮ.