ಮುರುಡೇಶ್ವರ : ಪ್ರವಾಸಕ್ಕೆಂದು ಆಗಮಿಸಿದ್ದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿರುವ ಘಟನೆ ಇಲ್ಲಿನ ಸಮುದ್ರ ತೀರದಲ್ಲಿ ನಡೆದಿದೆ. ಇಬ್ಬರು ಕೂಡ ಬಾಗಲಕೋಟೆ ಜಿಲ್ಲೆಯವರೆಂದು ತಿಳಿದು ಬಂದಿದೆ. ಅವರಲ್ಲಿ ಓರ್ವ ಮಂಜುನಾಥ ರಮೇಶ ಹಡಪದ(25) ಬಾಗಲಕೋಟೆ ಜಿಲ್ಲೆಯ ನೀರ ಬೂದಿಹಾಳನವನಾಗಿದ್ದು, ಹಾಲಿ ನವನಗರದಲ್ಲಿ ವಾಸವಾಗಿದ್ದನು. ಈತ ತನ್ನ ಕುಟುಂಬದವರೊಂದಿಗೆ ಮುರುಡೇಶ್ವರ ಪ್ರವಾಸಕ್ಕೆ ಬಂದ ವೇಳೆ ಕುಟುಂಬ ಸದಸ್ಯರೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

RELATED ARTICLES  ಪರೇಶ ಮೇಸ್ತಾ ಸಾವಿಗೆ ಬೇಗ ಸಿಗಲಿ ನ್ಯಾಯ: ಹೊನ್ನಾವರದಲ್ಲಿ ಕಾಂಗ್ರೆಸ್ ವತಿಯಿಂದ ನಡೆಯಿತು ಉಪವಾಸ ಸತ್ಯಾಗ್ರಹ

ಇನ್ನೋರ್ವ ಕ್ರಷ್ಣಪ್ಪ ಕರಿಯಪ್ಪ ಹರಕಂಗಿ ಕೂಡಾ (18 )ಬಾಗಲಕೋಟೆ ಜಿಲ್ಲೆಯ ಲೋಕಾಪುರ ನಿವಾಸಿ. ಈತ ತನ್ನ ಧಾರವಾಡ ಮೂಲದ ನಾಲ್ಕು ಜನ ಸ್ನೇಹಿತರೊಂದಿಗೆ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆಂದು ಪ್ರಕರಣ ದಾಖಲಾಗಿದೆ.

RELATED ARTICLES  ನದಿಯಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ