ಕುಮಟಾ : ನಗರದ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಯೊಬ್ಬಳಿಗೆ ತುರ್ತಾಗಿ ಅತ್ಯವಶ್ಯವಿದ್ದ ಒಂದು ಯುನಿಟ್ O+ve ರಕ್ತವನ್ನು ನೀಡಿ ರಕ್ತದಾನಿಯಾಗಿದ್ದಷ್ಟೇ ಅಲ್ಲದೇ ನಂತರ ಕುಮಟಾದಲ್ಲಿನ ‘ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ’ ಗೆ ಭೇಟಿ ನೀಡಿ ಆಸ್ಪತ್ರೆಯ ನೇತ್ರದಾನ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ನೇತ್ರದಾನಕ್ಕೆ ಅವಶ್ಯಕ ಕ್ರಮ ಕೈಕೊಂಡು ‘ನೇತ್ರ ದಾನಿ’ಯಾಗಿ ಅಂಕೋಲಾ ತಾಲೂಕು ವಂದಿಗೆಯ ಉತ್ಸಾಹೀ ಯುವಕ ಕಿರಣ ದೇವಿದಾಸ ನಾಯ್ಕ ರವರು ವಿಜಯದಶಮಿಯಂದು ನಡೆದ ತಮ್ಮ ಜನುಮ ದಿನಕ್ಕೆ ಸಾರ್ಥಕತೆ ನೀಡಿದರು.

RELATED ARTICLES  ಕಾರವಾರ ಬೋಟ್ ಮುಳುಗಡೆ ಅವಘಡ:ನಡೆಯುತ್ತಲೇ ಇದೆ ನಾಪತ್ತೆಯಾದವರ ಹುಡುಕಾಟ..!!

ಈ ಸಂದರ್ಭದಲ್ಲಿ ಕಿರಣ ನಾಯ್ಕ ರವರು ಮಾತನಾಡಿ ತನ್ನ ಈ ಕಾರ್ಯವು ಇನ್ನೊಬ್ಬರಿಗೆ ಜೀವದಾನ,ದೃಷ್ಟಿ ದಾನದ ಉದ್ದೇಶ ಹೊಂದಿದೆಯೇ ವಿನಃ ಖಂಡಿತ ಯಾವುದೇ ಪ್ರಚಾರಕ್ಕಲ್ಲ. ಹೆಚ್ಚಿನ ಜನ ರಕ್ತದಾನ ಮತ್ತು ನೇತ್ರದಾನಕ್ಕೆ ಮುಂದೆ ಬರಲು ತನ್ನ ಇಂದಿನ ಕಾರ್ಯ ಪ್ರೇರಣೆಯಾಗಲಿ ಎಂದು ಆಶಿಸಿ, ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದರು.

RELATED ARTICLES  ಮೈಮೇಲೆ ಮೇಲೆ ಹರಿದ ಲಾರಿ : ವ್ಯಕ್ತಿ ಸಾವು

ಲಯನ್ಸ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಅಭಯಹಸ್ತ ತಂಡದ ಸದಸ್ಯರು ಕಿರಣ ನಾಯ್ಕ ರವರ ಅನುಕರಣೀಯ ಮಾನವೀಯ ಸೇವೆಗಾಗಿ ಅವರನ್ನು ಅಭಿನಂದಿಸಿ, ಅವರಿಗೆ ಜನುಮ ದಿನದ ಶುಭಾಶಯ ಕೋರಿದರು.