ಹೊನ್ನಾವರ : ಅತಿವೇಗವಾಗಿ ಫೋಟೋ, ವಿಡಿಯೋ ಶೂಟ್ ನಡೆಸುವ ಎರಡೆರಡು ಬೋಟ್ ಧಾವಿಸಿದ್ದರಿಂದ ಉಂಟಾದ ತೆರೆಗೆ ಅವಘಡವೊಂದು ನಡೆದಿದ್ದು, ತಾಲೂಕಿನ ತನ್ಮಡಗಿಯ ಹತ್ತಿರ ಶರಾವತಿ ಹಿನ್ನೀರಿನಲ್ಲಿ ಏಕಾಎಕಿ ತೆರೆ ಅಪ್ಪಳಿಸಿ ದೋಣಿ ಮಗುಚಿದ್ದು ಪರಿಣಾಮ ಬಾಲಕಿಯೊರ್ವಳು ನದಿಯಲ್ಲಿ ಮುಳುಗಿದ್ದು,ಅದ್ರಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ..

ತನ್ಮಡಗಿ ನಿವಾಸಿ ವೃತ್ತಿಯಲ್ಲಿ ಮೀನುಗಾರಳಾಗಿರುವ ಮೋಹಿನಿ ವೆಂಕಟೇಶ ಅಂಬಿಗ ತಮ್ಮ ನಾಲ್ಕುವರೆ ವರ್ಷದ ಮಗಳಾದ ದಿಶಾಳನ್ನು ಕುಳ್ಳಿರಿಸಿಕೊಂಡು ತಾವೆ ದೋಣಿ ಚಲಾಯಿಸಿಕೊಂಡು ನದಿ ದಾಟಲು ಸಜ್ಜಾಗಿದ್ದರು. ಈ ವೇಳೆ ದೋಣಿಯಲ್ಲಿದ್ದ ನೀರನ್ನು ಕ್ಲಿನ್ ಮಾಡುತ್ತಿರುವಾಗ ಏಕಾಎಕಿ ಫೋಟೋ,ವಿಡಿಯೋ ಶೂಟ್ ನಡೆಸುವ ಎರಡೆರಡು ಬೋಟ್ ನದಿಯಲ್ಲಿ ಬಂದಿದೆ. ತೆರೆ ಅಪ್ಪಳಿಸಿ ದೊಣಿಯಲಿದ್ದ ಮಗು ನದಿಗೆ ಬಿದ್ದಿದೆ. ತಾಯಿ ಜೋರಾಗಿ ಕಿರುಚುಕೊಂಡಿದ್ದಾಳೆ. ತಕ್ಷಣವೇ ಸ್ಥಳೀಯರು ಧಾವಿಸಿ ನದಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿದ್ದಾರೆ.ಆದರೆ ಅದಾಗಲೇ ಹೊಟ್ಟೆಗೆ ನೀರು ಸೇರಿ ಉಸಿರಾಟದಲ್ಲಿ ಏರುಪೇರಾಗಿತ್ತು. ತಕ್ಷಣವೇ ಸ್ಥಳೀಯರ ಸಹಕಾರದಿಂದ ಹೊನ್ನಾವರ ತಾಲೂಕಾಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

RELATED ARTICLES  ನಿನಾದ ಕಾವ್ಯ ರಚನಾ ಸ್ಪರ್ಧೆ ಅಶ್ವಿನಿ ಕೋಡಿಬೈಲ್, ಸಾವಿತ್ರಿ ನಾಯಕ ಮತ್ತು ಶೋಭಾ ಹಿರೆಕೈಗೆ ಪ್ರಶಸ್ತಿ