ಭಟ್ಕಳ : ಕಾರು ಮತ್ತು ಬೈಕ್ ನ ನಡುವೆ ನಡೆದ ಘೋರ ಅಪಘಾತದಲ್ಲಿ ಸವಾರನಿಗೆ ತೀವ್ರ ಪೆಟ್ಟಾಗಿ ಜೀವನ್ಮರಣ ಸ್ಥಿತಿಗೆ ತಲುಪಿ, ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೂಡಭಟ್ಕಳ ಬೈಪಾಸ್ ನ ಡಾ. ಚಿತ್ತರಂಜನ್ ಸರ್ಕಲ್ ಬಳಿಯಲ್ಲಿ ನಡೆದಿದೆ. ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾದ ಬಗ್ಗೆ ವರದಿಯಾಗಿದೆ.

RELATED ARTICLES  "ಪ್ರೀತಿ"ಯ ಕವಯತ್ರಿ ಕನ್ನಿಕಾ ಹೆಗಡೆ ಇನ್ನು ಇತಿಹಾಸ ಮಾತ್ರ.

ಇಲ್ಲಿನ ಹೋಟೆಲ್ ಒಂದಲ್ಲಿ ಹೆಲ್ಪರ್ ಆಗಿ ಕೆಲಸ ನಿರ್ವಹಣೆಯ ಮಾಡುವ ದಿವಾಕರ ನಾಗಪ್ಪ ನಾಯ್ಕ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಭಟ್ಕಳದಿಂದ ಕುಂದಾಪುರ ಕಡೆಗೆ ಹೋಗುವ ಸಂದರ್ಭದಲ್ಲಿ ಕುಂದಾಪುರ ಕಡೆಯಿಂದ ಬರುತ್ತಿದ್ದ ಕಾರು ಎದುರಿನಿಂದ ಬಂದು ಮುಖಾಮುಖಿ ಡಿಕ್ಕಿಯಾಗಿದೆ.

RELATED ARTICLES  ಉತ್ತರಕನ್ನಡ ಜನತೆಗೆ ಮತ್ತೆ ಮಳೆಯ ಶಾಕ್...!

ದಿವಾಕರ ನನ್ನು ತೀವ್ರವಾಗಿ ತಲೆ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದ ಪರಿಣಾಮ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.