ಭಟ್ಕಳ : ಸಾಮಾಜಿಕ ಜಾಲತಾಣದ ಬಳಕೆ ಮಿತಿ ಮೀರಿ ಅವಾಂತರ ಸೃಷ್ಟಿಸುವ ಅದೆಷ್ಟೋ ಪ್ರಸಂಗಗಳನ್ನು ನಾವು ಕಾಣುತ್ತೇವೆ. ಸಾಮಾಜಿಕ ಜಾಲತಾಣದ ಗೆಳೆತನ ಸಾವಿನಲ್ಲಿ ಅಂತ್ಯವಾದ ಹಾಗೂ ಇದರಿಂದ ಪಾಠ ಕಲಿಯಬೇಕಾದ ಘಟನೆ ಇಂದು ನಡೆದಿದೆ. ಭಟ್ಕಳದ ಹಾಡವಳ್ಳಿಯಲ್ಲಿ ಇನ್ಸ್ಟಾಗ್ರಾಮ್ ಸ್ನೇಹಿತನ ಕಿರುಕುಳಕ್ಕೆ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಎಲ್ಲೆಡೆ ಸುದ್ದಿಯಾಗಿದೆ.

RELATED ARTICLES  ಪ್ರಾಥಮಿಕ ಹಂತದಲ್ಲಿ ಕೊಂಕಣಿ ಭಾಷೆನ್ನು ಬೋಧಿಸಲು ಅನುವು ಮಾಡುವಂತೆ ಸರಕಾರವನ್ನು ಒತ್ತಾಯಪಡಿಸುತ್ತೇನೆ : ಶಾಂತಾರಾಮ ಸಿದ್ದಿ

ನೇತ್ರಾ ಗೋವಾಳಿ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಎನ್ನಲಾಗಿದ್ದು, ನೇತ್ರಾಳ ಇನ್ಸ್ಟಾಗ್ರಾಮ್ ಸ್ನೇಹಿತ ಗೋವರ್ಧನ್ ಕಳೆದ ಒಂದು ವರ್ಷದಿಂದ ಇನ್ಸ್ಟಾ ಗ್ರಾಮ ನಲ್ಲಿ ಪರಿಚಯವಾಗಿದ್ದ. ಸ್ನೇಹದ ಪರಿಧಿಯಲ್ಲಿ ನೇತ್ರಾ ಮತ್ತು ಗೋವರ್ಧನ್ ಮುಕ್ತವಾಗಿ ಮಾತಾಡುತ್ತಿದ್ದರು ಎನ್ನಲಾಗಿದೆ.

ನಂತರದ ದಿನದಲ್ಲಿ ಯುವಕ ನೇತ್ರಾ ಗೆ ಬೆದರಿಸಿ, ಹಣವನ್ನ ನೀಡುವಂತೆ ಪೀಡಿಸುತ್ತಿದ್ದನಂತೆ. ಚಿತ್ರಹಿಂಸೆ ನೀಡಲು ಶುರುಮಾಡಿದ ಎನ್ನಲಾಗಿದ್ದು, ಇದರ ಜೊತೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೊಟೊಗಳನ್ನ ಹರಿಬಿಡುವದಾಗಿ ಬ್ಲ್ಯಾಕ್ ಮೇಲ್ ಸಹ ಮಾಡಿದ್ದು ಈತನ ಕಿರುಕುಳಕ್ಕೆ ಬೇಸತ್ತ ನೇತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಮೃತಳ ತಂದೆ ದೂರು ದಾಖಲಿಸಿದ್ದಾರೆ.

RELATED ARTICLES  Financial Process Automation Using Rpa