ಕುಮಟಾ : ತಾಯಿಯ ಬಾಳಂತನವೆಂದು ದೊಡ್ಡಮ್ಮನ ಮನೆಗೆ ಬಂದ ಐದು ವರ್ಷದ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮನೆ ಅಂಗಳದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಶೋಕನಮಕ್ಕಿಯಲ್ಲಿ ನಡೆದಿದೆ.
ಐದು ವರ್ಷದ ಪುಟಾಣಿ ಧೃತಿ ನಾರಾಯಣ ಪಟಗಾರ ಎಂಬಾಕೆಯೇ ಮೃತಪಟ್ಟಿರುವ ಬಾಲಕಿ. ಬಾಲಕಿ ಮೂಲತಃ ಹಿರೇಗುತ್ತಿಯವಳಾಗಿದ್ದು, ತಾಯಿ ಬಾಳಂತನದಲ್ಲಿ ಇರುವ ಕಾರಣ ತನ್ನ ತಾಯಿಯ ಅಕ್ಕನ ಮನೆ ಶೋಕನಮಕ್ಕಿಗೆ ಬಂದಿದ್ದಳು.
ಧೃತಿ ಅ ೨೫ ರಂದು ಸಂಜೆ ಮನೆಯ ಹೊರಗಡೆಯಲ್ಲಿ ಆಟವಾಡುತ್ತಿದ್ದಾಗ ಬಿದ್ದಿದ್ದು, ಈ ವೇಳೆ ಬಾಲಕಿಯ ತಲೆಗೆ ಗಾಯವಾಗಿದೆ. ಹಣೆಗೆ ಬಿದ್ದ ಒಳಪೆಟ್ಟಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಕಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರೂ ಆಸ್ಪತ್ತೆಗೆ ಬರುವ ಮಾರ್ಗಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.