ಜೋಯಿಡಾ : ಇದೀಗ ಎಲ್ಲೆಡೆ ಹುಲಿ ಉಗುರಿನ ಚರ್ಚೆ ನಡೆದಿದ್ದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮನೆಯಲ್ಲಿ ಇರಿಸಿದ್ದ ಜಿಂಕೆ ಕೋಡು, ಕಾಡು ಬೆಕ್ಕಿನ ದವಡೆ ಹಲ್ಲನ್ನು ವಶಪಡಿಸಿಕೊಂಡ ಘಟನೆ ಜೋಯಿಡಾದಲ್ಲಿ ನಡೆದಿದೆ.
ಕಾಳಿ ಹುಲಿ ಸಂರಕ್ಷಿತ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ ಸಿಂಧೆ ನೇತೃತ್ವದ ಅಧಿಕಾರಿಗಳು, ಜೋಯಿಡಾದ ಶಿವಾಜಿ ವೃತ್ತದ ಹತ್ತಿರ ಇರುವ ಪ್ರಕಾಶ ಎಂಬುವವರ ಮನೆಯ ಮೇಲೆ ದಾಳಿ ನಡೆಸಿದ ಜಿಂಕೆ ಕೋಡು, ಕಾಡುಬೆಕ್ಕಿನ ದವಡೆ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮನೆಯ ಯಜಮಾನ ಬಂಧಸಲಾಗಿದೆ.
RELATED ARTICLES ದಿ. ಮೋಹನ್ ಕೆ. ಶೆಟ್ಟಿಯವರ ಜನ್ಮ ದಿನಾಚರಣೆಯ ನಿಮಿತ್ತ ರೋಗಿಗಳಿಗೆ ಹಣ್ಣು ಹಂಪಲು-ಬ್ರೆಡ್ ವಿತರಣೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿಕೆ ಶೇಟ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಜೋಯಿಡಾ ವಲಯ ಅರಣ್ಯಾಧಿಕಾರಿ ಮಹಮ್ಮದ್ ಶಫಿ, ಬರ್ಚಿ ವಲಯ ಅರಣ್ಯಾಧಿಕಾರಿ ಅಶೋಕ್ ಶೆಳ್ಳೆನ್ನವರ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.