ಹೊನ್ನಾವರ : ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ತಾಲೂಕಿನ ಕಾಸರಕೋಡ ಹತ್ತಿರ ಬೈಕ್ ಗೆ ಗುದ್ದಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗ್ಯಾಸ್ ಟ್ಯಾಂಕರ್ ಚಾಲಕ ವೇಗವಾಗಿ ಓಡಿಸಿಕೊಂಡು ಬಂದು, ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಬೈಕ್ ಗೆ ಅಪಘಾತಪಡಿಸಿದ್ದಾನೆ ಎನ್ನಲಾಗಿದೆ. ವಾಹನವನ್ನು ಸ್ಥಳದಲ್ಲಿ ನಿಲ್ಲಸದೇ ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾನೆ.
ಈ ಅಪಘಾತದಲ್ಲಿ ಬೈಕ್ ಸವಾರ ಟೊಂಕಾ ಕಾಸರಕೊಡ ನಿವಾಸಿಗಳಾದ ಸೀತಾರಾಮ ಆನಂದ ತಾಂಡೇಲ, ಹಿಂಬದಿಯಲ್ಲಿ ಕುಳಿತ್ತಿದ್ದ ಸವಾರ ಗಣಪತಿ ಹನುಮಂತ ಮೇಸ್ತಾ ಗಂಭೀರ ಗಾಯಗೊಂಡಿದ್ದಾರೆ.