ಶಿರಸಿ: ಮರಾಠಿಕೊಪ್ಪದ ಸುಭಾಶನಗರ ಎರಡನೇ ಕ್ರಾಸ್‌ನಲ್ಲಿ ವಿದ್ಯುತ್‌ ತಂತಿ ಸ್ಪರ್ಷದಿಂದ ಸಾವಿಗೀಡಾದ ಗಂಡು ಮಂಗಕ್ಕೆ ಹಾಲು ಹಾಕಿ, ಅರಿಶಿಣ ಕುಂಕುಮ ಹಚ್ಚಿ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

RELATED ARTICLES  ಉತ್ತರಕನ್ನಡದ ಮೂವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ‌‌ ಪ್ರಶಸ್ತಿ

ವಿಡಿಯೋ

ಗುಂಪುಗೂಡಿ ಬಂದಿದ್ದ ಮಂಗಗಳಲ್ಲಿ ಒಂದು ಮಂಗವು ಮರದಿಂದ ಹಾರಿ ವಿದ್ಯುತ್‌ ಕಂಬಕ್ಕೆ ಅಳವಡಿಸಲಾಗಿದ್ದ ಕಂಬಕ್ಕೆ ಜಿಗಿದಿದೆ. ಈ ಸಂದರ್ಭದಲ್ಲಿ ಮಂಗಕ್ಕೆ ವಿದ್ಯುತ್‌ ಸ್ಪರ್ಷವಾಗಿ ಅಲ್ಲಿಯೇ ಸತ್ತು ಹೋಗಿತ್ತು. ಸುದ್ದಿ ತಿಳಿದ ಹೆಸ್ಕಾಂನವರು ವಿದ್ಯುತ್ ಸ್ಥಗಿತಗೊಳಿಸಿ ಸತ್ತ ಮಂಗನನ್ನು ಕೆಳಕ್ಕೆ ಹಾಕಿದ್ದಾರೆ. ಇದನ್ನು ಕಣ್ಣಾರೆ ಕಂಡು ಮರುಗಿದ ಸುಭಾಶ ನಗರದ ಜನರು ಶ್ರೀ ಮಾರುತಿಯ ಅವತಾರನಂತಿರುವ ಮಂಗನಿಗೆ ಭಕ್ತಿಯಿಂದ ನಮಿಸಿ ಪೂಜೆ ಹಾಗೂ ಇತ್ಯಾದಿ ಕಾರ್ಯಗಳನ್ನು ನೆರವೇರಿಸಿದ್ದಾರೆ.

RELATED ARTICLES  ನೊಬೆಲ್ ವರ್ಲ್ಡ್ ರೆಕಾರ್ಡ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಹೊನ್ನಾವರದ ಋತ್ವಿಕ್