ಕುಮಟಾ : ಹಿರಿಯ ರಾಜಕಾರಣಿ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ದಿ. ಗೋದಾವರಿ ಹೊಟೇಲ್ ನಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೋಕರ್ಣದ ಅಭಿವೃದ್ಧಿ, ರಸ್ತೆ, ಒಳಚರಂಡಿ ಹಾಗೂ ಮಾದನಗೇರಿಯಲ್ಲಿ ಮುಖ್ಯ ದ್ವಾರ ನಿರ್ಮಾಣದ ಕುರಿತಾಗಿ ಪತ್ರಕರ್ತರು ಅವರನ್ನು ಪ್ರಶ್ನಿಸಿದರು.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ ಅವರು ನಾನು ಸಚಿವನಾಗಿದ್ದ ಕಾಲದಲ್ಲಿ ಗೋಕರ್ಣದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದೇನೆ, ಅನುದಾನವನ್ನು ಬಿಡುಗಡೆ ಮಾಡಿದ್ದೇನೆ. ಇದೀಗ ಗೋಕರ್ಣದಲ್ಲಿ ಆಗಬೇಕಾಗಿರುವ ಅಭಿವೃದ್ಧಿಗಳ ಕಾರ್ಯದ ಕುರಿತಾಗಿ ಸೂಕ್ತ ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಕಾರ್ಯ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಕಾಂಗ್ರೆಸ್ ಪ್ರಮುಖರುಗಳಾದ ಪ್ರದೀಪ ನಾಯಕ, ರಾಘವೇಂದ್ರ ನಾಯಕ, ಹೊನ್ನಪ್ಪ ನಾಯಕ, ರತ್ನಾಕರ ನಾಯ್ಕ, ಶಿವಾನಂದ ನಾಯಕ, ನಾಗರಾಜ ನಾಯ್ಕ, ತೇಜಸ್ವಿ ನಾಯ್ಕ, ಅರುಣ ಗೌಡ, ಮನೋಹರ ಗೌಡ,ಇಬ್ರಾಹಿಂ ಸಾಬ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.