ಕುಮಟಾ : ಸವಿ ಪೌಂಡೇಶನ್ ಮೂಡಬಿದ್ರೆ ಇವರು ಉತ್ತರಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಯೋಗ, ಮೌಲ್ಯಾಧಾರಿತ ಕೃಷಿ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ  ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಿಂದ ಹಮ್ಮಿಕೊಂಡಿದೆ. ಪ್ರಸ್ತುತ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಿವಿಲ್ ಇಂಜೀನೀಯರಿಂಗ್ ಮತ್ತು ಆರ್ಕಿಟೆಕ್ಟ್  ವಿಭಾಗದಲ್ಲಿ ತಮ್ಮದೇ ಖ್ಯಾತಿ ಪಡೆದ ಆರ್ಕಿಟೆಕ್ಟ್ ರಾಮ ನಾಯಕರನ್ನು ಅವರ ವೃತ್ತಿನಿಷ್ಠೆ ಸಾಮಾಜಿಕ ಮೌಲ್ಯಗಳನ್ನು ಗುರುತಿಸಿ ಬೆಂಗಳೂರಿನ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು. 

RELATED ARTICLES  ಆತ್ಮಹತ್ಯೆಯ ನಾಟಕವಾಡಿದ ಮಹಿಳೆ : ಯಾಮಾರಿಸಿ ಗುಪ್ತವಾದ ಸ್ಥಳದಲ್ಲಿ ಕುಳಿತ ನಿವೇದಿತಾ ಭಂಡಾರಿ.

ಈ ಸಂದರ್ಭದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮ ನಾಯಕರು ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆಯಿಂದ ಯಶಸ್ಸನ್ನು ಪಡೆಯಬಹುದು ಎಂದರು. ಸಿವಿಲ್ ಇಂಜೀನಿಯರಿಂಗ್ ವಿಭಾಗದಲ್ಲಿ ಜನರನ್ನು ಸಮಾಜ ಅವರ ಕಾರ್ಯದಿಂದ ಗುರುತಿಸಿದ್ದು ಸಿವಿಲ್‌ಗೆ ಉತ್ತಮ ಅವಕಾಶಗಳು ಇದೆ ಎಂದು ಹೇಳಿದರು.

RELATED ARTICLES  ನಾಟಕದಲ್ಲಿ ಹಲವರಿಗೆ ಬಣ್ಣ ಹಚ್ಚಿ, ಎಲ್ಲರ ಮೆಚ್ಚುಗೆ ಗಳಿಸಿದ ಖ್ಯಾತ ಮೇಕಪ್ ಆರ್ಟಿಸ್ಟ್ ನಾಗರಾಜ ಭಂಡಾರಿ ಇನ್ನಿಲ್ಲ.

ಸವಿ ಫೌಂಡೇಶನ್ ಅಧ್ಯಕರಾದ ಡಾ. ಸಂದೀಪ ನಾಯಕ ಹಾಗೂ ಟ್ರಸ್ಟೀ ಇಂಜೀನಿಯರ್ ತೇಜಸ ನಾಯಕ, ರಾಮ ನಾಯಕರನ್ನು ಸನ್ಮಾನಿಸಿದರು. ಈ ಸಂರ್ದಧದಲ್ಲಿ ರಾಮ ನಾಯಕ ಧರ್ಮಪತ್ನಿ ಶೈಲಜಾ ನಾಯಕ, ಮಕ್ಕಳಾದ ಮಹಾನ್, ಮಯೂರ್ ಹಾಗೂ ಬಿಲ್ಡರ್ ಜಯಪ್ರಕಾಶ ನಾಯಕ ಉಪಸ್ಥಿತರಿದ್ದರು.