ಕುಮಟಾ : ಕುಮಟಾದಿಂದ ದ್ವಿಚಕ್ರವಾಹನದಲ್ಲಿ ತಮ್ಮ ಊರಾದ ಮೂರೂರಿಗೆ ತೆರಳುವ ವೇಳೆಯಲ್ಲಿ ಮೂರುರೂ ಗುಡ್ಡದ ಮೇಲೆ ಏಕಾಏಕಿ ಕಾಡು ಹಂದಿ ಅಡ್ಡ ಬಂದು ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ತಾಲೂಕಿನ ಅಡಿಕೆ ವ್ಯಾಪಾರಸ್ಥ, ಸಾಮಾಜಿಕ ಕಾರ್ಯಕರ್ತ, ಸಹಕಾರಿ ಧುರೀಣ ಹಾಗೂ ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿಯ ಮುಖ್ಯಸ್ಥ ಮೂರೂರು ಹುಣಸೆಮಕ್ಕಿಯ ಟಿ.ಪಿ. ಹೆಗಡೆ (೭೭) ಅಪಘಾತದಲ್ಲಿ ಕೊನೆಯುಸಿರೆಳೆದರು.

RELATED ARTICLES  ಹೊನ್ನಾವರಕ್ಕೆ ಆಗಮಿಸಿದ ದೇವೇಗೌಡರ ಹೆಲಿಕಾಪ್ಟರ್ ತಪಾಸಣೆ‌ ಮಾಡಿದ ಚುನಾವಣಾ ಸಿಬ್ಬಂದಿ

ಕಾಡುಹಂದಿ ಅಡ್ಡಬಂದು ತಮ್ಮ ಬೈಕ್ ನ ನಿಯಂತ್ರಣ ಕಳೆದುಕೊಂಡು ಬಿದ್ದ ಅವರು ತೀವ್ರ ಗಾಯಗೊಂಡ ಪರಿಣಾಮ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮೃತರಾಗಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಅವೈಜ್ಞಾನಿಕತೆ ಕುರಿತಾಗಿ ಧ್ವನಿ ಎತ್ತಿದ್ದರು. ಸಾಮಾಜಿಕ ಕಾರ್ಯಕರ್ತರಾಗಿ ಊರಿನ ಮತ್ತು ತಾಲೂಕಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಟಿ.ಪಿ.ಹೆಗಡೆ ಸ್ಥಳೀಯವಾಗಿ ಬಿಜೆಪಿಯನ್ನು ಬೆಳೆಸುವಲ್ಲಿ ಈ ಹಿಂದಿನಿಂದಲೂ ಶ್ರಮವಹಿಸಿದ್ದವರು. ಕುಮಟಾ ತಾಲೂಕು ಬಿಜೆಪಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಕುಮಟಾ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ, ಎಪಿಎಂಸಿ ನಿರ್ದೇಶಕ, ಹವ್ಯಕ ವಿದ್ಯಾವರ್ದಕ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

RELATED ARTICLES  ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪಾತ್ರ ಹಿರಿದಾದುದು : ಎಮ್ ಅಜಿತ್