ಕಾರವಾರ : ತಾಲೂಕಿನ ಹೈಚರ್ಚ ರಸ್ತೆಯ ಡಾಲ್ಪಿನ್ ಹೋಟಲ್ ಬಳಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಗಲಾಟೆಯಲ್ಲಿ ನಡುರಸ್ತೆಯಲ್ಲೆ ಯುವಕನಿಂದ ಇಬ್ಬರಿಗೆ ಚಾಕು ಇರಿತವಾದ ಘಟನೆ ನಡೆದಿದೆ. ಕಾರವಾರದ ಕಳಸವಾಡ ಹಾಗೂ ಶಿರವಾಡದ ಯುವಕರ ಭಾಗಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಯುವಕನೋರ್ವ ಇಬ್ಬರಿಗೆ ಚಾಕು ಇರಿದಿದ್ದು ಪೊಲೀಸರು ಸ್ಥಳಕ್ಕೆ ಬರುವ ವೇಳೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

RELATED ARTICLES  ಕಬಡ್ಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಲ್ಲಿ ಶಿರಸಿ ರಾಜ್ಯಕ್ಕೆ ಪ್ರಥಮ

ಚಾಕು ಇರಿತಕ್ಕೊಳಗಾದ ಇಬ್ಬರು ಯುವಕರನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ದಾಖಲು ಮಾಡಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎನ್ನುವುದು ಪೊಲೀಸ್ ತನಿಖೆಯ ನಂತರ ತಿಳಿದು ಬರಬೇಕಿದೆ.

RELATED ARTICLES  ದೇಶಪಾಂಡೆಯವರೊಂದಿಗೆ ಫೋಟೋ ತೆಗೆಸಿದರು ಆದರೆ ಇನ್ನೂ ವಾಹನ ಕೊಟ್ಟಿಲ್ಲ.