ಕಾರವಾರ : ಅನಂತಮೂರ್ತಿ ಹೆಗಡೆ ಮುಂದಾಳತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನಾಳೆ ನವೆಂಬರ್ 02 ರಿಂದ 9ರ ವರೆಗೆ ಶಿರಸಿಯಿಂದ ಕಾರವಾರದ ತನಕ ನಡೆಯಲಿರವ ಪಾದಯಾತ್ರೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕಾಶಿನಾಥ ಮೂಡಿ ಅವರು ಚಾಲನೆ ನೀಡಲಿದ್ದಾರೆ.

RELATED ARTICLES  ಕುಮಟಾದ ದೀವಗಿ ಸಮೀಪ ಅಪಘಾತ : ವಿದ್ಯಾರ್ಥಿ ಸಾವು.

ಅನಂತಮೂರ್ತಿ ಹೆಗಡೆ ಅವರ ಮುಂದಾಳತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಲಿದೆ. ಮಲನಾಡಿನ ಹೆಬ್ಬಾಗಿಲು ಶಿರಸಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದ್ದು, ಶಿರಸಿಯಿಂದ ಕುಮಟಾ ತಲುಪಲಿದ್ದು, ನಂತರದಲ್ಲಿ ಕುಮಟಾದಿಂದ ದೀವಗಿ, ಮಿರ್ಜಾನ, ಬರ್ಗಿ, ಹಿರೇಗುತ್ತಿ, ಮಾದನಗೇರಿ ಮಾರ್ಗವಾಗಿ ಪಾದಯಾತ್ರೆ ಕಾರವಾರ ತಲುಪಲಿದೆ.

ಪಾದಯಾತ್ರೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಮೆಡಿಕಲ್ ಆಸ್ಪತ್ರೆ ಕುರಿತಾಗಿ ಪಾದಯಾತ್ರೆ ಉದ್ದಕ್ಕೂ ಹೋರಾಟಗಾರು, ನ್ಯಾಯವಾದಿಗಳು, ಪತ್ರಕರ್ತರು,ರಾಜಕೀಯ ಪಕ್ಷದ ಮುಖಂಡರು ಹೆಜ್ಜೆ ಹಾಕಲಿದ್ದು,ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಾಗಿ ಸರಕಾರದ ಗಮನ ಸೆಳೆಯಲಿದ್ದಾರೆ.

RELATED ARTICLES  ಧರ್ಮಕ್ಕೋಸ್ಕರವೇ ರಾಜಕಾರಣ ಮಾಡಬೇಕು, ಅದನ್ನು ಬದುಕಿನಲ್ಲಿ ತೋರಿಸಿಕೊಡಬೇಕು: ದಿನಕರ ಶೆಟ್ಟಿ
IMG 20231101 WA0024
IMG 20231101 WA0025