ಕುಮಟಾ : ಗೂಡಂಗಡಿ ಒಂದಕ್ಕೆ‌ ಲಾರಿ ನುಗ್ಗಿ ಗೂಡಂಗಡಿಯಲ್ಲಿದ್ದವರು ಅದೃಷ್ವಷಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬರ್ಗಿ ಗ್ರಾಮದ‌ಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ‌66ರ‌ ಕೆಳಭಾಗದಲ್ಲಿದ್ದ ಬರ್ಗಿಯ ಮಂಜುನಾಥ ಪಟಗಾರ ಎಂಬುವವರಿಗೆ ಸೇರಿದ್ದ ಗೂಡಂಗಡಿ ಇದಾಗಿದ್ದು, ಕುಮಟಾ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಲಾರಿ  ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಬಂದು ಹೆದ್ದಾರಿಯಿಂದ ಸಾಕಷ್ಟು ದೂರಲ್ಲಿ ಇದ್ದ ಗೂಡಂಗಡಿಗೆ ನುಗ್ಗಿದೆ. ಈ ವೇಳೆ ಅಂಗಡಿಯ ಒಳಗಡೆ ಕುಳಿತ್ತಿದ್ದ ಮಾಲೀಕ ಮಂಜುನಾಥ ಪಟಗಾರ ಸೇರಿ ಅಲ್ಲೆ‌ ಕುಳಿತ್ತಿದ್ದ ನಾಲ್ಕಕ್ಕೂ ಹೆಚ್ಚು ಮಂದಿ ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

RELATED ARTICLES  ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ನಡೆಸಿದ ಬಾಲ ಅಪರಾಧಿ ಅರೆಸ್ಟ್

ಅಂಗಡಿ ಒಳಗೆ ಲಾರಿ ನುಗ್ಗಿದ್ದು, ಅಂಗಡಿ ಜಖಂ ಆಗಿದ್ದು, ಲಾರಿ ಸಹ ಜಖಂ‌ ಆಗಿದೆ. ಅಂಗಡಿಗೆ ಲಾರಿ‌ ನುಗ್ಗಿರುವುದರಿಂದ ಐವತ್ತು ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಮಳೆಗಾಲದಲ್ಲಿ ಸ್ವಿಮ್ಮಿಂಗ್ ಫೂಲ್ ನಂತಾಯ್ತು ಗೋಕರ್ಣ ಬಸ್ ನಿಲ್ದಾಣದ ಈ ಸ್ಥಳ.