ಕಾರವಾರದ ಸಮಾದೇವಿ ಸಭಾಭವನದಲ್ಲಿ ಜರುಗಿದ ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನವು ಭಾನುವಾರ ದಿನಾಂಕ 5 ನವೆಂಬರ್ 2023 ರಂದು ನೆರವೇರಿತು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಮಾಜದ ಜಿಲ್ಲಾ ಅಧ್ಯಕ್ಷರೂ ಹಿರಿಯರೂ ಆದ ಕೇಶವ ದತ್ತಾ ಪೆಡ್ನೇಕರ್ ಅವರು ವಹಿಸಿದ್ದರು.ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸಂಘಟನೆಯು ನಡೆದು ಬಂದ ದಾರಿಯ ಸಿಂಹಾವಲೋಕನ ಮಾಡಿ ರಾಷ್ಡ್ರ ಮಟ್ಟದಲ್ಲಿ ಜಿಲ್ಲೆಯ ಭಂಡಾರಿ ಸಮುದಾಯದವರು ಸಂಘಟನೆಗಾಗಿ ಸೇವೆಯನ್ನು ಸ್ಮರಿಸಿದರಲ್ಲದೇ ದೀಪಬೆಳಗಿ ತೆಂಗಿನ ಸಸಿಗೆ ನೀರೆರೆಯುವ ಮೂಲಕ ಈ ಕಾರ್ಯಕ್ರಮವನ್ನು ಡಾಕ್ಟರ್ ಸುಮಲತಾ ಮಣಕೀಕರ್ ಅವರ ಮುಖಾಂತರ ಉದ್ಘಾಟನೆ ಮಾಡಿಸಿದ್ದೇವೆ ನಮ್ಮ ಸಮಾಜವು ಕಲ್ಪವೃಕ್ಷದಂತೆ ಎತ್ತರಕ್ಕೆ ಬೆಳೆದು ಸಮಾಜ ಮುಖಿಯಾಗಬೇಕು 84 ವರ್ಷದ ಈ ಇಳಿವಯಸ್ಸಿನಲ್ಲೂ ಭಂಡಾರಿ ಸಮಾಜೋನ್ನತಿ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವಲ್ಲಿ ಸಹಕಾರ ನೀಡಿದ ಸರ್ವರನ್ನೂ ಅಭಿನಂದಿಸುವುದಲ್ಲದೇ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಗೋಕರ್ಣದಲ್ಲಿ ಭಂಡಾರಿ ಸಮಾಜದ ಬ್ರಹತ್ ಸಮ್ಮೇಳನದ ಸಂಕಲ್ಪ ಮಾಡಲಾಗಿದ್ದು ಗುರುಗಳ ಆಶೀರ್ವಾದದೊಂದಿಗೆ ಎಲ್ಲರೂ ಸೇರಿ ಅದನ್ನು ಯಶಸ್ವಿಯಾಗಿಸೋಣ ಎಂದು ಕರೆನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಮಟಾ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾದ. ಡಾಕ್ಟರ್ ಸುಮಲತಾ ಮಣಕೀಕರ್ ಮಾತನಾಡಿ ಸಮಾಜದ ಅಭ್ಯದಕ್ಕೆ ಸರ್ವರ ಸಹಕಾರ ಅಗತ್ಯ ಮುಖ್ಯವಾಗಿ ಯುವಜನತೆ ಕ್ರಿಯಾಶೀಲ ವಾಗಿರಬೇಕು ಸಮಾಜದ ಅಭ್ಯುದಯಕ್ಕೆ ಶಿಕ್ಷಣದ ಅವಶ್ಯಕತೆ ಇದೆ ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ದಿಸೆಯಲ್ಲಿ ಶ್ರಮಿಸಬೇಕೆಂದರು. ಮುಖ್ಯ ಅತಿಥಿಗಳಾದ ಸಮೀರ್ ನೀಲಕಂಠ ನಾಯ್ಕ ಅವರು ಮಾತನಾಡಿ ಸರಕಾರದ ಮಟ್ಟದಲ್ಲಿ ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಶಾಸಕರ ಹಾಗೂ ಉಸ್ತುವಾರಿ ಸಚಿವರ ಸಹಾಯದೊಂದಿ ಸಮಾಜದ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಅಹವಾಲು ಸಲ್ಲಿಸಲು ವೇದಿಕೆ ಸಜ್ಜುಗೊಳಿಸಿಕೊಡುವ ಭರವಸೆ ನೀಡಿದರು.
ಪ್ರಣವ್ ಮಣಕೀಕರ್ ಅವರು ತಮ್ಮ ಭಾಷಣದಲ್ಲಿ ಭಂಡಾರಿ ಸಮಾಜದ ಪ್ರತಿಭೆಗಳ‌ ಸಾಧನೆ ಕೊಂಡಾಡುತ್ತ ಕ್ರಿಕೆಟ್ ಕ್ಷೇತ್ರದಲ್ಲಿ ವಿರಾಟ್ ಕೊಯ್ಲಿ ಅವರಿಗೆ ಆಪ್ತರಾಗಿ ಕೊಂಡಾಡಲ್ಪಟ್ಟ ರಾಘವೇಂದ್ರ ದೇಶಭಂಡಾರಿ ನಮ್ಮವರೆಂಬುದಕ್ಕೆ ಹೆಮ್ಮೆ ಇದೆ ಚಂದ್ರಯಾನದ ಅಭಿಯಾನದಲ್ಲೂ ನಮ್ಮವರ ಕೊಡುಗೆ ಇದೆ ಇವೆಲ್ಲ ನಮಗೆ ಸೂರ್ತಿಯ ವಿಷಯವಾಗಿದೆ ಎಂದರು.

RELATED ARTICLES  ಉಪರಾಷ್ಟ್ರಪತಿಯಿಂದ ಗೌರವ ಸನ್ಮಾನ.


ನ್ಯಾಯವಾದಿ ಮನೋಹರ ಕಾಂಬ್ಳಿಯವರು ಸಮಾಜದ ಸದಸ್ಯರು ಸರ್ವ ಕ್ಷೇತ್ರದಲ್ಲೂ ಪ್ರಗತಿ ಹೊಂದುತ್ತಿರುವುದು ಹೆಮ್ಮೆಯ ಸಂಗತಿ ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಸರ್ವರೂ ಗಮನ ಹರಿಸಬೇಕೆಂದರು. ನಾರ್ತಕೆನರಾ ಭಂಡಾರಿ ಸಮಾಜ ಗೋವಾದ ಅಧ್ಯಕ್ಷ ಪ್ರಕಾಶ ಅವರೂ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ
ಪಾವಲೋ ಡಿ ಪೆಡ್ನೇಕರ್ ಕಾರವಾರ. ಕೇಶವ ಅಡ್ಪೇಕರ್ ಕುಮಟಾ,ನಾಗರಾಜ ಎಲ್ ದೇಶಭಂಡಾರಿ ಹೊನ್ನಾವರ , ಕೇಶವ ಎಂ ದೇಶಭಂಡಾರಿ ಭಟ್ಕಳ, ಜಗದೀಶ ಎನ್ ದೇಶಭಂಡಾರಿ ಶಿರಸಿ,ಪ್ರೇಮಾನಂದ ಬಿ‌ ನಾಯ್ಕ ಯಲ್ಲಾಪುರ ಹಾಗೂ ಇದುವರೆಗೂ ಸಮಾಜದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ನಾಗರಾಜ ಜಿ ನಾಯಕ ಶಿರಸಿ ಇವರುಗಳನ್ನು ಸನ್ಮಾನಿಸಲಾಯಿತು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು ಮಾಜಿ‌ ಜಿಲ್ಲಾಧ್ಯಕ್ಷ ಅರವಿಂದ ತೆಂಡೂಲ್ಕರ್, ವಿಠ್ಠಲ ಎಂ ಭಂಡಾರಿ ,ತಾಲೂಕಾ ಅಧ್ಯಕ್ಷರುಗಳಾದ ಮನೋಹರ ಕಿಂದಳಕರ್ ಕಾರವಾರ,ಶ್ರೀಧರ ಆರ್ ಬೀರಕೋಡಿ ಕುಮಟಾ ಪ್ರೇಮಾನಂದ , ಯಲ್ಲಾಪುರ,ನಾಗರಾಜ ನಾಯಕ ಶಿರಸಿ, ಗಣೇಶ ದೇಶ ಭಂಡಾರಿ ಭಟ್ಕಳ ,ಶ್ರೀಕಾಂತ ಎನ್ ದೇಶಭಂಡಾರಿ ಹೊನ್ನಾವರ.ಗ್ರಾಮೀಣ ಘಟಕದ ಅಧ್ಯಕ್ಷರಾದ ವಿಜಯ ಕಾಂಬ್ಳಿ,ಸುಧಾಕರ್ ಮಯೇಕರ್
ವಮಹಿಳಾ ಸಂಘದ ಛಾಯಾ ಜಾವ್ಕರ್,ಸೂಷ್ಮಾ ಗಾಂವ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಹೇಗಿತ್ತು? ಹೇಗಾಯ್ತು? ಚಂದಾವರದಲ್ಲಿ ಲಾಠಿ ಚಾರ್ಜ್! ನಡೆದಿದ್ದೇನು ಗೊತ್ತಾ?


ಜಿಲ್ಲಾ ಕಾರ್ಯದರ್ಶಿ ನಾಗರಾಜ ಜಿ ನಾಯಕ ವಾರ್ಷಿಕ ವರದಿ ಮಂಡಿಸಿದರು ಛಾಯಾ ಜಾವ್ಕರ್ ಕಾರವಾರ, ಶಂಕರ ದೇಶಭಂಡಾರಿ ಹೊನ್ನಾವರ,ಅರುಣ ಮಣಕೀಕರ್ ಕುಮಟಾ ಶಾಂತಾರಾಮ ಥಾಮ್ಸೆ ಕಾರವಾರ ಅತಿಥಿಗಳ ಪರಿಚಯ ಮಾಡಿದರು. ವಿವೇಕಾನಂದ ಪ್ರೌಢಶಾಲಾ ವಿದ್ಯಾರ್ಥಿಗಳು ಸ್ವಾಗತ ಗೀತವನ್ನು ಹಾಡಿದರು. ಉಪಾಧ್ಯಕ್ಷ ಕಾಗಾಲ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.