ಕುಮಟಾ : ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಚಗೋಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದಿದ್ದೆ. ಕಳೆದ ಮೂರು ದಿನಗಳಿಂದ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಚಗೋಣ,ಶಿವಪುರ ಪ್ರದೇಶದಲ್ಲ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಭಾಗದ ಜನ ಆಂತಕದಲ್ಲಿ ಕಾಲ ಕಳೆಯುವಂತಾಗಿತ್ತು. ಪದೆ ಪದೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಕಳೆದ ಮೂರು ದಿನಗಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿದೆ.ಚಿರತೆಯನ್ನ ಸೆರೆ ಹಿಡಿಯನ್ನ ಸಾಕಷ ಪ್ರಯತ್ನ ನಡೆಸಿದ್ದರು. ನಿನ್ನೆ ರಾತ್ರಿ ಸಹ ಮತ್ತೆ ಅದೇ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗುವ ಮೂಲಕ ಜನತೆಯಲ್ಲಿ ಆಂತಕ ಹೆಚ್ಚಾಗುವಂತೆ ಮಾಡಿತ್ತು.
ಚಿರತೆ ಕಾಣಿಸಿಕೊಂಡಿರುವ ಸುದ್ದಿ ತಿಳಿದಾಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಪ್ರತ್ನಿಸಿದ್ದು,ಚಿರತೆ ಸೆರೆ ಹಿಡಿಯಲು ಬೋನ್ ಒಂದನ್ನ. ಇಟ್ಟಿದ್ದು, ಅರಣ್ಯ ಇಲಾಖೆ ಇಟ್ಟಿರುವ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರವಿಶಂಕರ ಸಿ. ಎ.ಸಿ.ಎಫ್ ಜಿ. ಲೋಹಿತ್ ರವರ ಮಾರ್ಗದರ್ಶನದಲ್ಲಿ ಎಸ್.ಟಿ ಪಟಗಾರ ವಲಯ ಅರಣ್ಯಾಧಿಕಾರಿ ಕುಮಟಾ ಹಾಗೂ ಡಿ.ಆರ್.ಎಫ್.ಓ ರಾಘವೇಂದ್ರ ಹೂವಣ್ಣ ಗೌಡ ಅರಣ್ಯ ರಕ್ಷಕ ರಾಘವೇಂದ್ರ ನಾಯ್ಕ ಸಂಗಮೇಶ ಹಾಗೂ ಡ್ರೈವರ್ ಮಂಜು ಸುರೇಶ ನಾಯ್ಕ ಹಾಗೂ ಉರಗ ರಕ್ಷಕ ಪವನ್ ನಾಯ್ಕ ರವರು ಊರ ಜನರ ಸಹಕಾರದಲ್ಲಿ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಚಿರತೆ ಬೋನಿಗೆ ಬೀಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಅರಣ್ಯಾದಿಕಾರಿಗಳ ಕಾರ್ಯಕ್ಕೆ ಹೊಲನಗದ್ದೆ ಗ್ರಾ.ಪಂ ಅಧ್ಯಕ್ಷ ಎಂ.ಎಂ ಹೆಗಡೆ ಸೇರಿ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.