ಕುಮಟಾ : ಅಂತರಾಷ್ಟ್ರೀಯ ಮಟ್ಟದ ಕುಖ್ಯಾತ ಕಳ್ಳ ಕೊಲೆಗಾರ ಚಾರ್ಲ್ಸಶೋಭರಾಜ ಕುರಿತಾದ ಪುಸ್ತಕ “ದ  ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ” ಕೃತಿಯ ಲೋಕಾರ್ಪಣಾ ಕಾರ್ಯ ನ.16 ರ ಗುರುವಾರ ಅಪರಾಹ್ನ 3.30 ಕ್ಕೆ ಕುಮಟಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ಜರುಗಲಿದೆ. ಕೊಂಕಣ ಎಜ್ಯುಕೇಶನ್ ಟ್ರಸ್ಟ್, ವಿಧಾತ್ರಿ ಅಕಾಡೆಮಿ ಹಾಗೂ‌ ರಂಗಸಾರಸ್ವತ 

ಉತ್ತರಕ ಕನ್ನಡ ಇದರ ಸಹಯೋಗದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ನಿವೃತ್ತ ಆಯ್.ಪಿ.ಎಸ್ ಅಧಿಕಾರಿ, ಸಾಹಿತಿ ಹಾಗೂ ಉತ್ತಮ ವಾಗ್ಮಿ ಡಾ. ಡಿ.ವಿ ಗುರುಪ್ರಸಾದ್ ರಚಿಸಿರುವ ಈ ಕೃತಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ ಎನಿಸಿದೆ.

RELATED ARTICLES  ದ್ವಿತೀಯ ಪಿ.ಯು ಮರುಮೌಲ್ಯಮಾಪನ ಶ್ರಾವ್ಯಾ ಭಟ್ಟ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 5 ನೇ ರ್ಯಾಂಕ್

ಸಾಹಿತಿ ಮಹಾಬಲ ಮೂರ್ತಿ ಕೊಡ್ಲಕೆರೆ ಕೃತಿ ಬಿಡುಗಡೆ ಮಾಡಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವಕಾರ್ಯದರ್ಶಿ ಮುರಳೀಧರ ಪ್ರಭು ವಹಿಸಲಿದ್ದಾರೆ. ನಿವೃತ್ತ ಪೋಲಿಸ್ ಅಧಿಕಾರಿ ಎನ್.ಟಿ ಪ್ರಮೋದ ರಾವ್ ಅವರು ಹಾಗೂ ವಿಧಾತ್ರಿ ಅಕಾಡೆಮಿ ಮಂಗಳೂರಿನ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿಯವರು ಗೌರವ ಅತಿಥಿಗಳಾಗಿರಲಿದ್ದಾರೆ.

RELATED ARTICLES  ವಿಶೇಷ ರೀತಿಯಲ್ಲಿ ರಾಮವಂದನೆ ಸಲ್ಲಿಸಿದ ವಿದ್ಯಾರ್ಥಿಗಳು.

ಈ ಸಂದರ್ಭದಲ್ಲಿ ಡಾ.ಡಿ ವಿ ಗುರುಪ್ರಸಾದ್ ಅವರಿಂದ ವಿಶೇಷ ಉಪನ್ಯಾಸವು ನಡೆಯಲಿದೆ. ದಕ್ಷತೆ ಹಾಗೂ ಪ್ರಾಮಾಣಿಕತೆ, ಸಮಯಪಾಲನೆಗೆ ಹೆಸರಾದ ಡಾ.ಡಿ ಎಸ್ ಗುರುಪ್ರಸಾದರ ಅಭಿಮಾನಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಲೊಳ್ಳಬೇಕೆಂದು ರಂಗಸಾರಸ್ಚತ ಉತ್ತರ ಕನ್ನಡದ ಸಂಚಾಲಕ ಕಾಗಾಲ ಚಿದಾನಂದ ಭಂಡಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆತಿಳಿಸಿದ್ದಾರೆ.