ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ಇರುವ ಶ್ರೀ ಕರಿಕಾನ ಪರಮೇಶ್ವರಿ ಕಮಾನಿನ ಮುಂಭಾಗದಲ್ಲಿ 1008 ಹಣತೆ ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಯಿತು. ಅರೇಅಂಗಡಿ ಸುತ್ತಮುತ್ತಲಿನ ಯುವಕರು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ “ನಮೋ ಮತ್ತೊಮ್ಮೆ 2024” ಎನ್ನುವ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಗ್ರಾಮದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಯುವಕರು, ಸಾರ್ವಜನಿಕರು ಪ್ರೀತಿ, ಶೃದ್ದೆಯಿಂದ ಆಗಮಿಸಿ ದೀಪ ಹಚ್ಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಇದೇ ವೇಳೆ ಮುಂದಿನ ಅಮವಾಸ್ಯೆಯವರೆಗೂ ಪ್ರತಿನಿತ್ಯ 108 ಹಣತೆ ಹಚ್ಚುವ ಮೂಲಕ ದೀಪೋತ್ಸವ ಆಚರಣೆಗೆ ತೀರ್ಮಾನಿಸಲಾಯಿತು.

RELATED ARTICLES  ಮರಳು ಲಾರಿ ಹರಿದು‌ ಸಾವು.

ಈ ವೇಳೆ ಹಿಂದು ಸಂಘಟನೆಯ ಪ್ರಮುಖರಾದ ವಿಜಯ ಕಾಮತ್, ಸಂಜು ಶೇಟ್, ಮಂಜುನಾಥ ಶೇಟ್, ವಿರೇಂದ್ರ ಮೇಸ್ತ, ಅರ್ಜುನ್ ರಾಯ್ಕರ್, ಗ್ರಾ.ಪಂ. ಸದಸ್ಯರಾದ ರಜನಿ ನಾಯ್ಕ, ಗಣಪತಿ ಭಟ್(ಅಪ್ಪಿ ಭಟ್), ಕಿರಣ ಹೆಗಡೆ, ಬಿಜೆಪಿ ಮುಖಂಡರು, ಕಾರ್ಯಕರ್ತರು, ನುಡಿಹಬ್ಬ ಸಮಿತಿ ಸದಸ್ಯರು, ಹಾಜರಿದ್ದರು.

RELATED ARTICLES  ಪುರಾಣ ಪ್ರಸಿದ್ಧ ಇಡಗುಂಜಿ ಜಾತ್ರೆ ಸಂಪನ್ನ.