ಹೊನ್ನಾವರ : ನ.11 ರಂದು ಬೆಳಿಗ್ಗೆ 7 ಗಂಟೆಯಿಂದ 11 ಗಂಟೆ ನಡುವಿನ ಅವಧಿಯಲ್ಲಿ ಮನೆಯಲ್ಲಿದ್ದ ವ್ಯಕ್ತಿಯೋರ್ವ ಎಲ್ಲಿಯೋ ಹೋಗಿ ಈವರೆಗೆ ವಾಪಸ್ ಮನೆಗೆ ಬಂದಿಲ್ಲ ಎಂದು ಆತನ ಮಗ ತಂದೆಯನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ ಘಟನೆ ನಡೆದಿದೆ.

RELATED ARTICLES  ಮಹಿಳೆಯ ಕುತ್ತಿಗೆ ಒತ್ತಿ ಕೊಲ್ಲಲು ಯತ್ನ..? ಮಹಿಳೆಯ ಪತಿಯ ಮೇಲೂ ಸೂಲ್ಮಣೆಯಿಂದ ಹಲ್ಲೆ..?

ಹಿರೇಬೈಲ್ ಚಿಕ್ಕೊಳ್ಳಿಯ ಪ್ರಸನ್ನ ಗಣಪತಿ ನಾಯ್ಕ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ತಂದೆ ಗಣಪತಿ ತಿಮ್ಮಪ್ಪ ನಾಯ್ಕ (60) ಅಲ್ಲದೇ ತನ್ನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ನೀಡದೇ ಕಾಣೆಯಾಗಿರುತ್ತಾರೆ. ಕಾಣೆಯಾದ ತನ್ನ ತಂದೆಯನ್ನು ಹುಡುಕಿ ಕೊಡಬೇಕು ಎಂದು ಪ್ರಸನ್ನ ನಾಯ್ಕ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ಪಾಕಿಸ್ತಾನದ ಮಹಿಳೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ.