ಹೊನ್ನಾವರ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರಿಗೆ ಬೈಕ್ ಸವಾರ ವಾಹನ ಬಡಿದು ತನ್ನ ಬೈಕ್ ನಿಲ್ಲಿಸದೇ ಪರಾರಿಯಾಗಿರುವ ಘಟನೆ ತಾಲೂಕಿನ ಚಂದಾವರದ ಈದ್ಗಾ ಮೈದಾನ ಎದುರಿನ ಅಯ್ಯಂಗಾರ ಬೇಕರಿ ಸಮೀಪ ನಡೆದಿದೆ. ಅಪಘಾತದಿಂದ ವ್ಯಕ್ತಿಯ ತಲೆ ಹಾಗೂ ಬಲಗಾಲಿಗೆ ಗಾಯವಾಗಿದೆ.

ಚಂದಾವರದ ನಿವಾಸಿ ಅಬ್ದುಲ್ ಖಾದರ ಅಬ್ದುಲ್ ಶೇಖ್ (64) ಗಾಯಗೊಂಡ ವೃದ್ಧ. ಇವರು ಚಂದಾವರ ನೂರಾನಿ ಮೊಹಲ್ಲಾದಿಂದ ಚಂದಾವರ ನಾಖಾಕ್ಕೆ ಹೋಗಿದ್ದರು. ವಾಪಸ್ ಮನೆಗೆ ಬರಲು ನಡೆದುಕೊಂಡು ಬರುತ್ತಿದ್ದಾಗ ಯಾರೋ ಒಬ್ಬ ಮೋಟಾರ ಸೈಕಲ್ ಸವಾರ ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ್‍ನ್ನು ಚಂದಾವರ ನಾಕಾದಿಂದ ಅರೇಅಂಗಡಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಬ್ದುಲ್ ಖಾದರ ಇವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಅಬ್ದುಲ್ ಅವರ ತಲೆ ಹಾಗೂ ಬಲಗಾಲು, ಬಲಗೈಗೆ ಗಾಯ ಪಡಿಸಿದ್ದು, ಅಪಘಾತದ ನಂತರ ಮೋಟಾರ್ ಸೈಕಲ್ ನಿಲ್ಲಿಸದೇ ಪರಾರಿಯಾಗಿದ್ದಾನೆ. ಮೋಟಾರ ಸೈಕಲ್ ಸವಾರನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬ್ದುಲ್ ಅವರ ಮಾವ ಮಹಮ್ಮದ್ ಗೌಸ್ ಅಬ್ದುಲ್ ರಹಿಂ ಶೇಖ್ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ಬಿ.ಜೆ.ಪಿಯವರ ಷಡ್ಯಂತ್ರ ಬಯಲು ಮಾಡಲು ಜನ ಜಾಗೃತಿ ಸಮಾವೇಶ