ಹೊನ್ನಾವರ : ನ.13 ರಂದು ಸಾಯಂಕಾಲ 5.30 ಗಂಟೆಯಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಹನುಮಂತ ಗೌಡ ಅವರು ಕವಲಕ್ಕಿಯಲ್ಲಿರುವ ಝರಾಕ್ಸ ಅಂಗಡಿಯ ಹೊರಗಡೆ ಮಲಗಿದ್ದರು. ಈ ವೇಳೆ ಕುತ್ತಿಗೆಯಲ್ಲಿದ್ದ ಬೆಲೆ ಬಾಳುವ ಬಂಗಾರದ ಚೈನನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವರ ಕುತ್ತಿಗೆಯಲ್ಲಿದ್ದ 15 ಗ್ರಾಂ ತೂಕದ, 70 ಸಾವಿರ ರು. ಬೆಲೆಬಾಳುವ ಬಂಗಾರದ ಚೈನನ್ನು ಎಗರಿಸಿ ಪರಾರಿಯಾಗಿದ್ದು, ಈ ಬಗ್ಗೆ ಕಳ್ಳರನ್ನು ಹುಡುಕಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕಿನ ಕಾವೂರದ ಹನುಮಂತ ಮಂಜು ಗೌಡ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ಸಾಹಿತಿ ಸಂದೀಪರ 25 ನೇ ಕೃತಿ ನಾಳೆ ಬಿಡುಗಡೆ

ಆರೋಪಿತರನ್ನು ಹಾಗೂ ನನ್ನ ಬಂಗಾರದ ಚೈನ್‍ನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹನುಮಂತ ಮಂಜು ಗೌಡ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ಮಳೆಗೆ ಕುಸಿದ ಶಾಲಾ ಕಂಪೌಂಡ್ ಗೋಡೆ