ಕುಮಟಾ : ತಾಲೂಕಿನ ಹೆಗಲೆಯ ಶಕ್ತಿ ಕ್ಷೇತ್ರ ಹಾಗೂ ದೈವೀ ಕ್ಷೇತ್ರವಾಗಿರುವ, ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ನೆಲೆಸಿರುವ ಭುಜಗಪುರದಲ್ಲಿ ದೇವಾಲಯದ ಮಹಾದ್ವಾರ ಉದ್ಘಾಟನೆ ವಿದ್ಯಕ್ತವಾಗಿ ನೆರವೇರಿತು. ಬೇಡಿದ್ದನ್ನು ಅನುಗ್ರಹಿಸುವ ಕ್ಷೇತ್ರದ ಅಧಿದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಈ ಮಹಾದ್ವಾರವನ್ನು ನಿರ್ಮಾಣ ಮಾಡಲಾಗಿದೆ.

ಪ್ರಮುಖರಾದ ಶ್ರೀಧರ ಕೃಷ್ಣ ಹೆಗಡೆ ಕುಟುಂಬದವರು ಹಾಗೂ ಊರಿನ ನಾಗರೀಕರು ಮತ್ತು ಹಾಲಕ್ಕಿ ಸಮಾಜದ ಪ್ರಮುಖರ ಶ್ರಮದಿಂದ ಈ ಮಹಾದ್ವಾರ ನಿರ್ಮಾಣಗೊಂಡಿದ್ದು, ದೇವಾಲಯದ ಮಹಾದ್ವಾರವನ್ನು ವಿದ್ಯುಕ್ತವಾಗಿ ಬುಧವಾರ ಉದ್ಘಾಟಿಸಲಾಯಿತು. 

RELATED ARTICLES  ಶಿರಸಿಯಲ್ಲಿ ಯಶಸ್ವಿಯಾದ ಮಿಡ್ ಡೇ ಫ್ರೂಟ್ ಕಾರ್ಯಕ್ರಮ.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶ್ರೀಧರ ಕೃಷ್ಣ ಹೆಗಡೆ, ವಿನಾಯಕ ಹೆಗಡೆ, ಗುರುಪ್ರಕಾಶ ಹೆಗಡೆ, ಶ್ರೀಕಾಂತ ಭಟ್ಟ, ಶ್ರೀಧರ ನಾರಾಯಣ ಗೌಡ, ತುಳಸು ಗೌಡ, ಸುಬ್ರಾಯ ಗೌಡ, ವಸಂತ ಗೌಡ ಹಾಗೂ ಹಲಕ್ಕಿ ಸಮಾಜದ ಗೌಡ ಮನೆಯವರು, ಬುದ್ದಿವಂತ ಕೋಲಕಾರ ಮನೆಯವರು ಹಾಜರಿದ್ದರು.

RELATED ARTICLES  ಬೈಕ್ ಸವಾರನ ಮೇಲೆಯೇ ಹರಿಯಿತು ಲಾರಿ: ಛಿದ್ರವಾಯ್ತು ವ್ಯಕ್ತಿಯ ದೇಹ: ಕುಮಟಾದಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ.

ಹೆಗಲೆಯ ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ದೇವತೆ ನೆಲೆಸಿರುವ ಪುಣ್ಯ ಕ್ಷೇತ್ರವಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಿಂದಿನಿಂದಲೂ ನಡೆಯುತ್ತಾ ಬಂದಿದ್ದು ಇದೇ ಬರುವ ಜನವರಿಯಲ್ಲಿ ಆಯತ ಚಂಡಿ ಮಹಾಯಾಗ ನಡೆಯಲಿದೆ. ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀದೇವಿಯು, ತನ್ನದೇ ಪವಾಡಗಳ ಮೂಲಕ ಜನರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ ಶಕ್ತಿದೇವತೆ ಎನಿಸಿಕೊಂಡಿರುವುದು ಇಲ್ಲಿಯ ವಿಶೇಷ.