ಯಲ್ಲಾಪುರ: ‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿಯನ್ನು ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ವತಿಯಿಂದ ನ.19 ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎ.ಪಿ.ಎಂ.ಸಿ.ಯ ಅಡಿಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಆಶಯ ನುಡಿಗಳನ್ನು ಆಡಲಿದ್ದು, ಹಿರಿಯ ಕವಿ ಡಾ. ಗೋವಿಂದ ಹೆಗಡೆ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ವನರಾಗ ಶರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ, ಕವಿ ಗಣಪತಿ ಹೆಗಡೆ ಕೊಂಡದಕುಳಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕವಿಗೋಷ್ಠಿಯಲ್ಲಿ ಸಿಂಧುಚಂದ್ರ ಶಿರಸಿ, ಶೋಭಾ ನಾಯ್ಕ ಹಿರೇಕೈ, ಸುರೇಶ ಕಡೆಮನಿ, ನಾಗಪತಿ ಹೆಗಡೆ ಹುಳಗೋಡ, ಗಣಪತಿ ನಾಯ್ಕ ಗೇರಸೊಪ್ಪ, ಸುಮಂಗಲಾ ಚಕ್ರಸಾಲಿ, ಕಮಲಾ ಕೊಂಡದಕುಳಿ, ಸುಬ್ರಾಯ ಬಿದ್ರಮನೆ, ಶ್ರೀಧರ ಅಣಲಗಾರ, ವಿನಯ ಪಾಲನಕರ, ಶಿವಲೀಲಾ ಹುಣಸಗಿ, ದತ್ತಾತ್ರೇಯ ಹೆಗಡೆ ಕಣ್ಣಿಪಾಲ್, ಪ್ರತಿಮಾ ಕೋಮಾರ, ಅಬ್ದುಲ್ ರೆಹಮಾನ್, ಗಾಯತ್ರಿ ರಾಘವೇಂದ್ರ, ದತ್ತಗುರು ಕಂಠಿ, ಮಂಜುನಾಥ ಎನ್.ವಿ., ಷರೀಫ್ ಹಾರ್ಸಿಕಟ್ಟಾ, ಸಣ್ಣಪ್ಪ ಭಾಗವತ್, ಗಂಗಾಧರ ಎಸ್. ದಿನೇಶ ಗೌಡ ಮಲವಳ್ಳಿ, ರಾಘವೇಂದ್ರ ನಾಯ್ಕ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ‘ಹಣತೆ’ ಯಲ್ಲಾಪುರ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಹೊನ್ನಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣತೆ ಜಿಲ್ಲಾ ಘಟಕವು ಪ್ರತಿಬಾರಿ ಭಾವೈಕ್ಯದ ನೆಲೆಯಲ್ಲಿ ರಮ್ಜಾನ್ ಕವಿಗೋಷ್ಠಿ, ದೀಪಾವಳಿ ಕವಿಗೋಷ್ಠಿ, ಕ್ರಿಸ್‌ಮಸ್ ಕವಿಗೋಷ್ಠಿ ಹಮ್ಮಿಕೊಳ್ಳುವ ಯೋಜನೆ ಘೋಷಿಸಿದಂತೆ, ಕಳೆದ ಎಪ್ರಿಲ್ ನಲ್ಲಿ ರಮ್ಜಾನ್ ಕವಿಗೋಷ್ಠಿಯನ್ನೂ, ಇದೀಗ ದೀಪಾವಳಿ ಕವಿಗೋಷ್ಠಿ ಮತ್ತು ಡಿಸೆಂಬರ್ ನಲ್ಲಿ ಕ್ರಿಸ್‌ಮಸ್ ಕವಿಗೋಷ್ಠಿ ಹಮ್ಮಿಕೊಳ್ಳಲಿದೆ ಎಂದು ರಾಘವೇಂದ್ರ ಹೊನ್ನಾವರ ತಿಳಿಸಿದ್ದಾರೆ.