ಕುಮಟಾ : ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಮತ್ತು ಕರಾವಳಿ ಜನ ಜೀವನ ವ್ಯವಸ್ಥೆ ಮೇಲೆ ವ್ಯತಿರಿಕ್ತವಾಗಿ ಪ್ರಭಾವ ಬೀರುವುದರಿಂದ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು. ಅವರು ಮಂಗಳವಾರ ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಉಲ್ಲೇಖಿಸಿಲ್ಪಟ್ಟ, ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಇದನ್ನೂ ಓದಿ – ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಮಟಾದ ವಿಕಲಚೇತನರು.
ಕಸ್ತೂರಿ ರಂಗನ್ ವರದಿಯನ್ನು ತೀರಸ್ಕರಿಸುವಲ್ಲಿ ರಾಜ್ಯ ಸರಕಾರವು ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಬೇಕಾಗಿದ್ದು, ಕೇಂದ್ರ ಸರಕಾರವು ಜನರ ಭಾವನೆಯನ್ನು ಹಾಗೂ ವರದಿಯಿಂದ ಉಂಟಾಗುವ ಪರಿಣಾಮವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕೆಂದು ಅವರು ಹೇಳಿದರು.

ಕಸ್ತೂರಿ ರಂಗನ್ ವರದಿಯಿಂದ ಉಂಟಾಗುವ ಪರಿಣಾಮದ ಕುರಿತು ಜಿಲ್ಲಾದ್ಯಂತ ಇನ್ನೂರಕ್ಕೂ ಮಿಕ್ಕಿ ಪ್ರದೇಶಗಳಲ್ಲಿ ಕಸ್ತೂರಿ ರಂಗನ್ ವಿರೋಧ ಜಾಗೃತಿ ಸಭೆಗಳನ್ನು ಸಂಘಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಸಭೆಯಲ್ಲಿ ಬೀರಾ ಗೌಡ, ಗಣಪತಿ ಮರಾಠಿ, ಮಹಾದೇವ ನಾಯ್ಕ, ಕೃಷ್ಣ ದೇವಪ್ಪ ನಾಯ್ಕ, ತಿಮ್ಮ ಶಿವಪ್ಪ ನಾಯ್ಕ, ಪ್ರಕಾಶ ರಾಮಚಂದ್ರ ಹೆಗಡೆ, ನಾರಾಯಣ ರಾಮಾ ಗೌಡ ಮುಂತಾದವರು ಉಪಸ್ಥಿತರಿದ್ದರು. ಫಿರೋಜ್ ಸಾಬ್ ಸ್ವಾಗತಿಸಿ, ವಂದಿಸಿದರು.
