ಕುಮಟಾ : ಗೋಕರ್ಣದ ಬಿದ್ರಗೇರಿಯ ನಿವಾಸಿ 3ನೇ ತರಗತಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಶಿವು ಗೌಡ, ನೀರೆಂದು ಭಾವಿಸಿ ಆಕಸ್ಮಿಕವಾಗಿ ವಿಷಕಾರಿ ದ್ರವವನ್ನು ಸೇವಿಸಿದ ಪರಿಣಾಮ ಅಸ್ವಸ್ಥಗೊಂಡಿದ್ದು, ಅವನನ್ನು ಕುಮಟಾದ ತಾಲೂಕಾಸ್ಪತ್ರೆಗೆ ಸೇರಿಸಲಾಗಿತ್ತು.

ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ ಶಾಸಕ ದಿನಕರ ಶೆಟ್ಟಿ ಅವರು ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ಬಾಲಕನ ಚಿಕಿತ್ಸೆಗೆ ತುರ್ತು ವ್ಯವಸ್ಥೆ ಕಲ್ಪಿಸಿ, ಸದ್ಯ ಬಾಲಕ ಅಪಾಯದಿಂದ ಪಾರಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಚೇತೇಶ್ ಶಾನಭಾಗ ಹಾಗೂ ವೈದ್ಯಾಧಿಕಾರಿಗಳಾದ ಶ್ರೀನಿವಾಸ ನಾಯಕ, ಗಣೇಶ ನಾಯಕ ಉಪಸ್ಥಿತರಿದ್ದರು.
