ಕುಮಟಾ : ರೋಟರಿಯ ನಿರಂತರ ಪ್ರಕ್ರಿಯೆ ಎಂಬಂತೆ ನಾನು ಕುಮಟಾ, ಹೊನ್ನಾವರ, ಭಟ್ಕಳ, ಗೋಕರ್ಣಕ್ಕೆ ಭೇಟಿ ನೀಡಿದ್ದೇನೆ. ರೋಟರಿಯ ತಳಮಟ್ಟದ ಕಾರ್ಯಚಟುವಟಿಕೆಗಳನ್ನು ನೋಡುವುದು ಇದರ ಉದ್ದೇಶ. ಈ ಸಂದರ್ಭದಲ್ಲಿ ರೋಟರಿಯಿಂದ ಕುಮಟಾದಲ್ಲಿ ನಡೆದಿರುವ ಪ್ರಕ್ರಿಯೆಗಳನ್ನು ಗಮನಿಸಿದ್ದೇನೆ. ಜನಸಾಮಾನ್ಯರ ಬದುಕಿಗೆ ಪೂರಕವಾಗಿ ಜನಜೀವನಕ್ಕೆ ಅನುಕೂಲವಾಗುವ ಯಾವುದೇ ಅವಾಲುಗಳಿದ್ದರೂ ರೋಟರಿ ಅದಕ್ಕೆ ಸ್ಪಂದಿಸಲಿದೆ ಎಂದು ರೋಟರಿ ಸಂಸ್ಥೆಯ 3170ದ ಜಿಲ್ಲಾ ಗವರ್ನರ್ ನಾಸಿರ್ ಬೋರ್ಸಡ್ವಾಲಾ ಹೇಳಿದರು. ಅವರು ಕುಮಟಾ ರೋಟರಿ ಕ್ಲಬ್ಬಿಗೆ ಅಧಿಕೃತವಾಗಿ ಭೇಟಿ ನೀಡಿ, ಇಲ್ಲಿನ ನಾದಶ್ರೀ ಕಲಾ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಕುಮಟಾ ತಾಲೂಕಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ರೋಟರಿ ಯಾವುದನ್ನು ಮಾಡಬಹುದು ಎಂಬುದನ್ನು ಈ ಹಿಂದಿನಿಂದಲೂ ಗಮನಿಸುತ್ತಾ, ಅವುಗಳನ್ನು ಕಾರ್ಯರೂಪಕ್ಕೆ ತಂದಿದೆ. ನಾನು ಅದನ್ನು ಇಂದು ಗಮನಿಸಿದ್ದೇನೆ. ಕುಮಟಾ ಬ್ಲಡ್ ಬ್ಯಾಂಕ್ ಗೆ ಭೇಟಿ ನೀಡಿದ್ದೇನೆ. ಇದರಿಂದ ಜನರಿಗೆ ಆಗುತ್ತಿರುವ ಅನುಕೂಲತೆಗಳ ಬಗ್ಗೆ ಮೆಚ್ಚುಗೆ ಇದೆ. 

Udaya Bazar Sports

ಒಂದು ಕೋಟಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಟರಿ ಅಳವಡಿಸಿರುವ ಉಪಕರಣ ವೀಕ್ಷಣೆ ಮಾಡಿದ್ದೇನೆ. ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾದ ಡಯಾಲಿಸಿಸ್ ಮಷೀನ್ ಗಳು ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆಯ ಪರಿಸರ, ವೈದ್ಯರುಗಳ ಕಳಕಳಿ ಮೆಚ್ಚುವಂತಹದು. ಅತ್ಯಂತ ಸುಸಜ್ಜಿತವಾಗಿ ಶುಚಿಯಾಗಿ ಆಸ್ಪತ್ರೆಯನ್ನು ಇಡಲಾಗಿದೆ. ಅತ್ಯುತ್ತಮ ಆಡಳಿತ ಆಸ್ಪತ್ರೆಯಲ್ಲಿ ಇದೆ. ನನಗೆ ಮೆಚ್ಚುಗೆ ಆಗಿದೆ ಎಂದು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.

RELATED ARTICLES  ಸಂಭ್ರಮ ಸಡಗರದೊಂದಿಗೆ ಭಟ್ಕಳದಲ್ಲಿ ಈದ್ ಮಿಲಾದ್ ಆಚರಣೆ

ಆಸ್ಪತ್ರೆಗೆ ಐ.ಸಿಯು ವಾರ್ಡ ಅವಶ್ಯಕತೆ ಇದೆ. ಇನ್ನೂ ಎರಡು ಡಯಾಲಿಸಿಸ್ ಮಶೀನ್ ಬೇಕಾಗಬಹುದು. ಇದರ ಜೊತೆಗೆ ಸಾರ್ವಜನಿಕರಿಗೆ ಅತ್ಯಗತ್ಯವಾದ ಇತರ ಅಹವಾಲುಗಳನ್ನೂ ನಾನು ಕೇಳಿದ್ದೇನೆ. ತೂಕ ಕಡಿಮೆ ಇರುವ ಜನಿಸಿದ ಮಗುವಿಗೆ ಅಗತ್ಯವಿರುವ ಎನ್.ಐ.ಸಿ.ಯು ಕೇವಲ ಒಂದಿದ್ದು, ಇಲ್ಲಿಯ ಜನವಸತಿ ಆಧರಿಸಿ ಇನ್ನೂ ಹೆಚ್ಚಿನ ಅಗತ್ಯತೆ ಇದೆ ಎಂಬುದು ನನ್ನ ಅನಿಸಿಕೆ. ಹೀಗಾಗಿ ಇದಕ್ಕೆ‌ ಸಂಬಂಧಿಸಿ ಅಹವಾಲು ಸಲ್ಲಿಸಲು ಹೇಳಿದ್ದು, ಅದನ್ನು ಪೂರೈಸಲು ಪ್ರಯತ್ನಿಸುತ್ತೇನೆ ಎಂದರು.

Vinayak Rexin

ಜನಜೀವನ ಅಭಿವೃದ್ಧಿಗೆ ಹಾಗೂ ಜನರ ಆರೋಗ್ಯ ಶಿಕ್ಷಣ ಇನ್ನಿತರ ವಿಚಾರಗಳಿಗೆ ಅವಶ್ಯವಿರುವ ಎಲ್ಲ ಕಾರ್ಯಗಳನ್ನು ಸೇವಾ ರೂಪದಲ್ಲಿ ರೋಟರಿ ಮಾಡಲು ಸಿದ್ಧವಿದೆ ಕುಮುಟಾದಲ್ಲಿ ಈ ಹಿಂದಿನಿಂದಲೂ ರೋಟರಿ ಕ್ಲಬ್ ತುಂಬಾ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದ್ದು ಜನಮನ್ನಣೆ ಪಡೆದಿರುವುದು ಸಂತಸದ ವಿಚಾರ ಎಂದರು. 

ಇಲ್ಲಿಯ ಜನರು, ಶಾಸಕರು ಮುಖಂಡರುಗಳು ರೋಟರಿಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು ಸಹಕಾರ ನೀಡುತ್ತಿದ್ದಾರೆ. ಜನರ ಉತ್ತಮ ಸಹಕಾರದಿಂದ ಮಾತ್ರ ನಾವು ಮುಂದುವರೆಯಲು ಸಾಧ್ಯ ಹೀಗಾಗಿ ಎಲ್ಲರ ಸಹಕಾರ ಕೋರುತ್ತೇನೆ ಎಂದರು. ನಿರಾಶಾವಾದಿಗಳನ್ನು ಆಶಾವಾದಿಗಳಾಗಿ ಮಾಡುವ ಪ್ರಯತ್ನ ನಡೆದಿದೆ. ರೋಟರಿಯು ಈ ಬಗ್ಗೆ ಕಾರ್ಯ ಮಾಡುತ್ತದೆ ಎಂದು ಅವರು ವಿವಿಧ ಯೋಜನೆಗಳನ್ನು ವಿವರಿಸಿದರು.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಶುಭಾರಂಭ: ಜನ ಮನ ಗೆದ್ದ ವೈವಿದ್ಯಮಯ ಕಾರ್ಯಕ್ರಮಗಳು.

ಕುಮಟಾದಲ್ಲಿ ಸ್ವಚ್ಛತೆಗೆ ಅಗತ್ಯವಾದ ಯೋಜನೆಗಳನ್ನು ರೋಟರಿ ಮೂಲಕ ಮಾಡುವಂತೆ ಪತ್ರಕರ್ತರು ಸೂಚಿಸಿದಾಗ, 

ಸ್ವಚ್ಛತೆಯ ಬಗ್ಗೆ ಅಗತ್ಯ ಸಹಕಾರವನ್ನು ರೋಟರಿಯಿಂದ ಜನರು ಬಯಸುತ್ತಿದ್ದಾರೆ ಎಂದಾದರೆ ಖಂಡಿತಾ ನಾವು ಆ ಬಗ್ಗೆ ಚಿಂತನೆ ನಡೆಸುತ್ತೇವೆ. ಗೋಕರ್ಣ ದಲ್ಲಿ ಕೊಳಚೆ ನೀರು ದೇವಾಲಯದಲ್ಲಿ ಹರಿಯುತ್ತಿರುವುದನ್ನು ಗಮನಿಸಿದ್ದೇನೆ. ಕುಮಟಾದಲ್ಲಿ ಆಗಬೇಕಾದ ಕಾರ್ಯದ ಬಗ್ಗೆ ಅಹವಾಲು ನೀಡಿದರೆ ನಾವು ಅದಕ್ಕೆ‌ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.

ಹೈಟೆಕ್ ಶೌಚಾಲಯ, ರೆಸ್ಟ್ ಹೌಸ್ ಹಾಗೂ ಇತರ ಅಗತ್ಯತೆಗಳನ್ನು ನಾವು ಮಾಡಿಕೊಡಲು ಪ್ರಯತ್ನ ಮಾಡುತ್ತೇವೆ. ಅದರ ಉಸ್ತುವಾರಿಯನ್ನು ಸ್ಥಳೀಯ ಆಡಳಿತ ಹಾಗೂ ಪುರಸಭೆಯವರು ತೆಗೆದುಕೊಳ್ಳಬೇಕು ನಿತ್ಯ ನಡೆಯುವ ಚಟುವಟಿಕೆಗಳನ್ನು ಗಮನಿಸಬೇಕು ಇವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಪುರಸಭೆಯ ಸಂಬಂಧಿಸಿದವರು ಪಡೆದುಕೊಳ್ಳುವುದಾದರೆ ನಾವು ಇದನ್ನು ಕಾರ್ಯರೂಪಕ್ಕೆ ಇಳಿಸಲು ಪ್ರಯತ್ನಿಸುತ್ತೇವೆ ಎಂದರು.

Disha Enterprise

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಎನ್ ಆರ್ ಗಜು ಸ್ವಾಗತಿಸಿದರು ಕಾರ್ಯದರ್ಶಿ ಅರ್ಜಿಗುಣಗಿ ವಂದಿಸಿದರು. ರೋಟರಿಯ ಅಸಿಸ್ಟೆಂಟ್ ಗವರ್ನರ್ ವಸಂತ ರಾವ್ ಇದ್ದರು. ಡಾ. ಡಿ.ಡಿ ನಾಯಕ, ಸುರೇಶ ಭಟ್ಟ ಇತರರು ಸಹಕರಿಸಿದರು.