ಭಟ್ಕಳ: ಬಾವಿಯಿಂದ ನೀರು ಸೇದುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಶಿರಾಲಿ ಕ್ಯಾಂಬ್ರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದೇವಿ ಗೊಂಡ ಎಂದು ತಿಳಿದು ಬಂದಿದೆ. ಈಕೆ ಮನೆಯ ಮುಂದೆ ಇರುವ ಬಾವಿಯಲ್ಲಿ ನೀರನ್ನು ಸೇದಿ ಕೊಡವನ್ನು ಬಾವಿಯಿಂದ ಹೊರ ತೆಗೆಯುವಾಗ ಆಕಸ್ಮಿಕವಾಗಿ ತಲೆ ಕೆಳಗಾಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

